ಕರ್ನಾಟಕ

karnataka

ಪ್ರಧಾನಿಗೆ ಜೀವ ಬೆದರಿಕೆ ಕರೆ: ಆರೋಪಿ ಬಂಧನ, ಕಾರಣ ಮಾತ್ರ ವಿಚಿತ್ರ..

ಯಾವುದೇ ಕಾನೂನು ಕ್ರಮಕೈಗೊಳ್ಳುವ ಮೊದಲು ದೆಹಲಿ ಪೊಲೀಸರು, ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೊಂದಿಗೆ ಚರ್ಚಿಸಿ ಆರೋಪಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುವುದು..

By

Published : Jun 4, 2021, 4:34 PM IST

Published : Jun 4, 2021, 4:34 PM IST

ಪ್ರಧಾನಿಗೆ ಜೀವ ಬೆದರಿಕೆ ಕರೆ
ಪ್ರಧಾನಿಗೆ ಜೀವ ಬೆದರಿಕೆ ಕರೆ

ದೆಹಲಿ :ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈಶಾನ್ಯ ದೆಹಲಿಯ ಖಾಜುರಿ ಖಾಸ್ ಎಂಬ ಪ್ರದೇಶದ ಸಲ್ಮಾನ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿಯನ್ನು ವಿಚಾರಣೆ ನಡೆಸಿದಾಗ, ನಾನು ಜೈಲಿಗೆ ಹೋಗ ಬಯಸಿದ್ದರಿಂದ ಈ ರೀತಿ ಮಾಡಿದೆ ಎಂದಿದ್ದಾನೆ. 2018ರಲ್ಲಿ ಸಲ್ಮಾನ್​ನನ್ನು ಕೊಲೆ ಹಾಗೂ ಡ್ರಗ್ಸ್​​ ಪ್ರಕರಣದಲ್ಲಿ ಬಂಧಿಸಿ, ಬಾಲಪರಾಧಿ ಕೇಂದ್ರಕ್ಕೆ ಕಳಿಸಲಾಗಿತ್ತು.

ಆರೋಪಿಯು ಗುರುವಾರ ಮಧ್ಯರಾತ್ರಿಯಲ್ಲಿ ಪಿಸಿಆರ್‌ಗೆ ಕರೆ ಮಾಡಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಲ್ಮಾನ್ ಕರೆ ಮಾಡಿದ ಸಂಖ್ಯೆಯನ್ನು ಕೂಡಲೇ ಪತ್ತೆ ಹಚ್ಚಿದ ಪೊಲೀಸ್ ಘಟಕ ಆರೋಪಿಯನ್ನು ಬಂಧಿಸಿದೆ.

ಯಾವುದೇ ಕಾನೂನು ಕ್ರಮಕೈಗೊಳ್ಳುವ ಮೊದಲು ದೆಹಲಿ ಪೊಲೀಸರು, ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೊಂದಿಗೆ ಚರ್ಚಿಸಿ ಆರೋಪಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುವುದು.

ABOUT THE AUTHOR

...view details