ಕರ್ನಾಟಕ

karnataka

ETV Bharat / bharat

ಕೊರೊನಾ ಅವಧಿಯ ಶುಲ್ಕ ಪಾವತಿಸದ ಕಾರಣಕ್ಕೆ ಮಕ್ಕಳನ್ನು ಕೊಠಡಿ ಕೂಡಿಹಾಕಿದ ಶಾಲೆ - ಮಕ್ಕಳನ್ನು ಕೋಣೆಯಲ್ಲಿ ಕೂಡಿಹಾಕಿ ಕಿರುಕುಳ

ದೆಹಲಿಯ ಶಾಲೆಯೊಂದು ಕೊರೊನಾ ಅವಧಿಯ ಶುಲ್ಕ ಪಾವತಿಸದ ಕಾರಣಕ್ಕೆ ಕೊಠಡಿಯಲ್ಲಿ ಮಕ್ಕಳನ್ನು ಕೂಡಿಹಾಕಿ ಬೀಗ ಹಾಕಲಾಗಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

delhi-locks-students-in-room-for-not-depositing-fees-for-corona-period
ಕೊರೊನಾ ಅವಧಿಯ ಶುಲ್ಕ ಪಾವತಿಸದ ಕಾರಣಕ್ಕೆ ಕೊಠಡಿಯಲ್ಲಿ ಮಕ್ಕಳನ್ನು ಕೂಡಿಹಾಕಿದ ಶಾಲೆ

By

Published : Sep 6, 2022, 9:53 PM IST

ನವದೆಹಲಿ: ಶಾಲಾ ಶುಲ್ಕ ಪಾವತಿಸದ ಕಾರಣಕ್ಕೆ ವಿದ್ಯಾರ್ಥಿಗಳು ಸುಮಾರು ಮೂರು ಗಂಟೆಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ ಘಟನೆ ದೆಹಲಿಯಲ್ಲಿ ಮಂಗಳವಾರ ನಡೆದಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಇಲ್ಲಿನ ರೋಹಿಣಿ ಸೆಕ್ಟರ್ 9ರಲ್ಲಿ ಬರುವ ಜಿಡಿ ಗೋಯೆಂಕಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕೊರೊನಾ ಅವಧಿಯಲ್ಲಿನ ಶುಲ್ಕವನ್ನು ಠೇವಣಿ ಮಾಡದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ದೂರ ಇಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಮಕ್ಕಳನ್ನು ಕೋಣೆಯಲ್ಲಿ ಕೂಡಿಹಾಕಿ ಕಿರುಕುಳ ನೀಡಲಾಗಿದೆ. ವಾಶ್ ರೂಂಗೂ ಬಿಟ್ಟಿಲ್ಲ ಮತ್ತು ಕುಡಿವ ನೀರು ಕೂಡ ಕೊಟ್ಟಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಶುಲ್ಕದ ವಿವಾದ ಹಲವು ತಿಂಗಳಿಂದ ನಡೆಯುತ್ತಿದೆ. ಈ ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ಅಲ್ಲದೇ, ಶಾಲೆಯ ಅವ್ಯವಹಾರದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಶಾಲಾ ಆಡಳಿತ ಮಂಡಳಿಯವರು ಮಕ್ಕಳನ್ನು ಕೂಡಿ ಹಾಕಿ ಬೀಗ ಹಾಕಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಈ ಬಗ್ಗೆ ಪೋಷಕರು ಪೊಲೀಸರಿಗೆ ಕರೆ ಮಾಡಿ ದೂರು ನೀಡಲಾಗಿದೆ. ಆದರೆ, ಪ್ರಮುಖ ಮುಖಂಡರೊಬ್ಬರ ಪತ್ನಿಯೇ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ಮಕ್ಕಳ ಪಾಲಕರು ದೂರಿದ್ದಾರೆ.

ಇದನ್ನೂ ಓದಿ:ಕ್ರೀಡಾಂಗಣದಲ್ಲಿ ಸೇನಾ ಆಕಾಂಕ್ಷಿಗಳ ನಡುವೆ ಹೊಡೆದಾಟ, ಗುಂಡಿನ ದಾಳಿ ಶಂಕೆ: ವಿಡಿಯೋ ವೈರಲ್​

ABOUT THE AUTHOR

...view details