ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಲಾಕ್‌ಡೌನ್: ರಾಜ್ಯಸಭಾ ನೌಕರರಿಗೆ ವರ್ಕ್​ ಫ್ರಮ್ ಹೋಂ - ರಾಜ್ಯಸಭಾ ನೌಕರರಿಗೆ ವರ್ಕ್​ ಫ್ರಮ್ ಹೋಂ ಸುದ್ದಿ

ರಾಜ್ಯಸಭಾ ಸಚಿವಾಲಯದ ಎಲ್ಲಾ ವರ್ಗದ ನೌಕರರು, ಕಚೇರಿಯಲ್ಲಿ ಕೆಲಸ ಮಾಡುವ ಅವಶ್ಯಕತೆಗಳಿಗೆ ಒಳಪಟ್ಟು, 20.04.2021 ರಿಂದ 23.04.2021 ರವರೆಗೆ ಮನೆಯಿಂದ ಕೆಲಸ ಮಾಡಬಹುದು ಎಂದು ತಿಳಿಸಲಾಗಿದೆ.

Rajya Sabha employees to work from home
ದೆಹಲಿ ಲಾಕ್‌ಡೌನ್ ಹಿನ್ನೆಲೆ ರಾಜ್ಯಸಭಾ ನೌಕರರಿಗೆ ವರ್ಕ್​ ಫ್ರಮ್ ಹೋಂ

By

Published : Apr 20, 2021, 12:28 PM IST

ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯ ಎಲ್ಲಾ ನೌಕರಿಗೆ ಶುಕ್ರವಾರದವರೆಗೆ ವರ್ಕ್​ ಫ್ರಮ್​ ಹೋಂ ನೀಡಲಾಗಿದೆ.

"ಈ ಅವಧಿಯಲ್ಲಿ ಕಚೇರಿಯ ಸುಗಮ ಕಾರ್ಯನಿರ್ವಹಣೆಗೆ ಮನೆಯಿಂದ ಕೆಲಸ ಮಾಡುವವರು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಲಭ್ಯವಿರಬೇಕು. ರಾಜ್ಯಸಭಾ ಸಚಿವಾಲಯದ ಎಲ್ಲಾ ವರ್ಗದ ನೌಕರರು, ಕಚೇರಿಯಲ್ಲಿ ಕೆಲಸ ಮಾಡುವ ಅವಶ್ಯಕತೆಗಳಿಗೆ ಒಳಪಟ್ಟು, 20.04.2021 ರಿಂದ 23.04.2021 ರವರೆಗೆ ಮನೆಯಿಂದ ಕೆಲಸ ಮಾಡಬಹುದು. ಆಡಳಿತಾತ್ಮಕ ತುರ್ತು ಸಂದರ್ಭಗಳಲ್ಲಿ, ಅಗತ್ಯ ಸಿಬ್ಬಂದಿಯನ್ನು ಸಂಬಂಧಪಟ್ಟ ವಿಭಾಗೀಯ ಮುಖ್ಯಸ್ಥರು ಕಚೇರಿಗೆ ಹಾಜರಾಗುವಂತೆ ಕೇಳಬಹುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಗರದಲ್ಲಿ ಕೋವಿಡ್​-19 ಸೋಂಕು ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಏಪ್ರಿಲ್ 26 ರವರೆಗೆ ಆರು ದಿನಗಳ ಲಾಕ್​ಡೌನ್ ಘೋಷಿಸಿದ್ದಾರೆ.

ಇದನ್ನೂ ಓದಿ:ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ 'ನೈಟ್​ ಕರ್ಫ್ಯೂ' ಆದೇಶ ಹೊರಡಿಸಿದ ತೆಲಂಗಾಣ

ಕಳೆದ 24 ಗಂಟೆಗಳಲ್ಲಿ, 240 ಸಾವುಗಳು ವರದಿಯಾಗಿದ್ದು, 23,686 ಹೊಸ ಕೊರೊನಾ ವೈರಸ್ ಸೋಂಕುಗಳು ವರದಿಯಾಗಿವೆ. ಪ್ರಸ್ತುತ ಇಲ್ಲಿ 76,887 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details