ಕರ್ನಾಟಕ

karnataka

ETV Bharat / bharat

ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್‌ಎಸ್ ಎಂಎಲ್‌ಸಿ ಕವಿತಾ

ನಾವು ಯಾವುದೇ ರೀತಿಯ ವಿಚಾರಣೆಯನ್ನು ಎದುರಿಸಲು ಸಿದ್ಧರಾಗಿದ್ದೇವೆ. ತನಿಖಾ ಸಂಸ್ಥೆಯವರು ಬಂದು ಪ್ರಶ್ನೆಗಳನ್ನು ಕೇಳಿದರೆ ನಾವು ಖಂಡಿತವಾಗಿಯೂ ಉತ್ತರಿಸುತ್ತೇವೆ. ಆದರೆ ತಮಗೆ ಬೇಕಾದ ವಿಚಾರಗಳನ್ನಷ್ಟೇ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿ ನಾಯಕರ ಇಮೇಜ್‌ಗೆ ಕಳಂಕ ತರುವ ಕ್ರಮಗಳನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದು ಕವಿತಾ ಹೇಳಿದರು.

ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್‌ಎಸ್ ಎಂಎಲ್‌ಸಿ ಕವಿತಾ
Delhi Liquor Scam TRS MLC Kavitha says ready to face trial

By

Published : Dec 1, 2022, 2:22 PM IST

ಹೈದರಾಬಾದ್:ದೆಹಲಿ ಮದ್ಯ ಹಗರಣ ಪ್ರಕರಣ ಕುರಿತಂತೆ ತಾವು ಯಾವುದೇ ವಿಚಾರಣೆ ಎದುರಿಸಲು ಸಿದ್ಧ ಎಂದು ಟಿಆರ್​ಎಸ್​ ಎಂಎಲ್​ಸಿ ಮತ್ತು ಸಿಎಂ ಕೆಸಿಆರ್ ಪುತ್ರಿ ಕವಿತಾ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐಗಳು ಕೆ. ಕವಿತಾ ಮತ್ತು ಅವರ ಪಕ್ಷದ ನಾಯಕರ ಮೇಲೆ ಕಣ್ಣಿಟ್ಟಿವೆ ಎಂದು ಹೇಳಲಾಗಿದೆ.

ದೆಹಲಿ ಮದ್ಯ ಹಗರಣ ಪ್ರಕರಣದ ಆರೋಪಿಗಳಲ್ಲಿ ಒಬ್ಬರೆಂದು ಜಾರಿ ನಿರ್ದೇಶನಾಲಯದ ರಿಮಾಂಡ್ ವರದಿಯಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ವರದಿಗಳ ಬಗ್ಗೆ ಕವಿತಾ ಪ್ರತಿಕ್ರಿಯಿಸಿದರು.

ನಾವು ಯಾವುದೇ ರೀತಿಯ ವಿಚಾರಣೆಯನ್ನು ಎದುರಿಸಲು ಸಿದ್ಧರಾಗಿದ್ದೇವೆ. ತನಿಖಾ ಸಂಸ್ಥೆಯವರು ಬಂದು ಪ್ರಶ್ನೆಗಳನ್ನು ಕೇಳಿದರೆ ನಾವು ಖಂಡಿತವಾಗಿಯೂ ಉತ್ತರಿಸುತ್ತೇವೆ. ಆದರೆ ತಮಗೆ ಬೇಕಾದ ವಿಚಾರಗಳನ್ನಷ್ಟೇ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿ ನಾಯಕರ ಇಮೇಜ್‌ಗೆ ಕಳಂಕ ತರುವ ಕ್ರಮಗಳನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದು ಕವಿತಾ ಹೇಳಿದರು.

ತಾನು ಮತ್ತು ಪಕ್ಷದ ಇತರ ನಾಯಕರು ತಪ್ಪು ಮಾಡಿದ್ದರೆ ಅದನ್ನು ಸಾಬೀತುಪಡಿಸಿ ಜೈಲಿಗೆ ಕಳುಹಿಸಲಿ ಎಂದು ಕವಿತಾ ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದರು.

ಇದನ್ನೂ ಓದಿ: ದೆಹಲಿ ಮದ್ಯ ಹಗರಣ: 10 ಸಾವಿರ ಪುಟಗಳ ಚಾರ್ಜ್​ಶೀಟ್​, ಡಿಸಿಎಂ ಸಿಸೋಡಿಯಾ ಹೆಸರಿಲ್ಲ

ABOUT THE AUTHOR

...view details