ನವದೆಹಲಿ:ದೆಹಲಿ ಅಬಕಾರಿ ನೀತಿ ಹಗರಣಗೆ ಸಂಬಂಧಿಸಿದಂತೆ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ಬಂಧಿಸಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿಕಟ ಸಹಚರ ಈ ಸಮೀರ್ ಮಹೇಂದ್ರು ಎಂದು ಹೇಳಲಾಗಿದೆ.
ಮತ್ತೊಂದು ಗಮನಿಸಿದ ಬೇಕಾದ ಸಂಗತಿ ಎಂದರೆ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ವಿಜಯ್ ನಾಯರ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿತ್ತು. ಇದಾದ ಒಂದೇ ದಿನದಲ್ಲೇ ಮದ್ಯ ವಿತರಕ ಸಂಸ್ಥೆಯಾದ ಇಂಡೋಸ್ಪಿರಿಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರು ಬಂಧನವಾಗಿದೆ.
ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ತಂದಿದ್ದ ಹೊಸ ಅಬಕಾರಿ ನೀತಿಯಿಂದ ನೀತಿಯು ಮದ್ಯದ ಕಾರ್ಟೆಲ್‌ಗಳಿಗೆ ಸಹಾಯ ಮಾಡಲಾಗಿದೆ ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಿಬಿಐ ಹಾಗೂ ಇಡಿ ಪ್ರತ್ಯೇಕ ತನಿಖೆ ನಡೆಸುತ್ತಿದೆ.
ಸಿಸೋಡಿಯಾ ಅವರ ಸಹಚರ ಎಂದು ಹೇಳಲಾದ ಅರ್ಜುನ್ ಪಾಂಡೆ ಅವರು ನಾಯರ್ ಎಂಬುವವರ ಪರವಾಗಿ ಮಹೇಂದ್ರು ಅವರಿಂದ ಸುಮಾರು 2 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಈ ಸಂಬಂಧ ಮಹೇಂದ್ರು ಅವರನ್ನು ಕಳೆದ ರಾತ್ರಿ ವಿಚಾರಣೆ ನಡೆಸಲಾಗಿತ್ತು. ಇದೀಗ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ಕೆಸಿಆರ್ ಪುತ್ರಿ ಕೆ. ಕವಿತಾ