ಕರ್ನಾಟಕ

karnataka

ETV Bharat / bharat

ಕಾಂಜಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣ.. ನಾಲ್ವರ ವಿರುದ್ಧ ಕೊಲೆ ಪ್ರಕರಣದಡಿ ವಿಚಾರಣೆ - ಆರೋಪಿಗಳ ವಿರುದ್ಧ ಕೊಲೆ ಪ್ರಕರಣದಡಿ ವಿಚಾರಣೆ

ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಕಾಂಜಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣದಡಿ ವಿಚಾರಣೆ ನಡೆಸಲಾಗುವುದು ಎಂದು ರೋಹಿಣಿ ನ್ಯಾಯಾಲಯ​ ತಿಳಿಸಿದೆ.

delhi-kanjhawala-hit-and-drag-case-court-frame-murder-charges-against-four-accused
ಕಾಂಜಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣ.. ನಾಲ್ವರ ವಿರುದ್ಧ ಕೊಲೆ ಪ್ರಕರಣದಡಿ ವಿಚಾರಣೆ

By

Published : Jul 27, 2023, 7:52 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕಾಂಜಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ನ್ಯಾಯಾಲಯ ಗುರುವಾರ ಮಹತ್ವದ ಹೇಳಿಕೆ ನೀಡಿದೆ. ನಾಲ್ವರು ಆರೋಪಿಗಳ ವಿರುದ್ಧ ದೋಷಾರೋಪಣೆಗಳನ್ನು ರೂಪಿಸುವಾಗ, ಅವರ ವಿರುದ್ಧ ಕೊಲೆ ಪ್ರಕರಣದಡಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್​ ತಿಳಿಸಿದೆ.

ಇದೇ ವರ್ಷದ ಜನವರಿ 1ರಂದು ದುಷ್ಕರ್ಮಿಗಳು ಯುವತಿಯೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆದು ನಂತರ ಆಕೆಯನ್ನು ಕಿಲೋಮೀಟರ್​​ಗಟ್ಟಲೇ ಎಳೆದೊಯ್ದಿದ್ದರು. ಇದರ ಪರಿಣಾಮದಿಂದಾಗಿ ಅಂಜಲಿ ಎಂಬ ಯುವತಿ ಸಾವನ್ನಪ್ಪಿ, ರಸ್ತೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಸಂಬಂಧ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ, ಅವರ ವಿರುದ್ಧ ಚಾರ್ಜ್​ಶೀಟ್​ ಸಹ ದಾಖಲಿಸಿದ್ದಾರೆ.

ಇದನ್ನೂ ಓದಿ:ದೆಹಲಿಯ ಕಾಂಜಾವಾಲಾ ಹಿಟ್​ ಅಂಡ್​ ರನ್​ ಪ್ರಕರಣ: 11 ಪೊಲೀಸರು ಸಸ್ಪೆಂಡ್​

ಇದೀಗ ದೆಹಲಿಯ ರೋಹಿಣಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೀರಜ್ ಗೌರ್ ಅವರು ಆರೋಪಿಗಳಾದ ಮನೋಜ್ ಮಿತ್ತಲ್, ಅಮಿತ್ ಖನ್ನಾ, ಕೃಷ್ಣ ಮತ್ತು ಮಿಥುನ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಸಾಕ್ಷಾಧಾರಗಳ ನಾಶ), 212 (ಅಪರಾಧಿಗೆ ಆಶ್ರಯ ನೀಡುವುದು), 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಆರೋಪಗಳನ್ನು ನಿಗದಿ ಪಡಿಸಿದ್ದಾರೆ.

ಇನ್ನುಳಿದ ಮೂವರು ಆರೋಪಿಗಳಾದ ದೀಪಕ್, ಅಶುತೋಷ್ ಮತ್ತು ಅಂಕುಶ್ ವಿರುದ್ಧ ನ್ಯಾಯಾಲಯವು ಐಪಿಸಿ ಸೆಕ್ಷನ್ 201, 212, 182, 34ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಿದೆ. ಇದರೊಂದಿಗೆ ನ್ಯಾಯಾಲಯವು ಈ ಮೂವರನ್ನು ಐಪಿಸಿ ಸೆಕ್ಷನ್ 120ಬಿ ಕಾಯ್ದೆಯಿಂದ ಖುಲಾಸೆಗೊಳಿಸಿದೆ. ಇದೀಗ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಗೆ ಆಗಸ್ಟ್ 14ರಂದು ದಿನಾಂಕವನ್ನು ನಿಗದಿಪಡಿಸಿದ್ದು, ನಾಲ್ವರು ಆರೋಪಿಗಳ ವಿರುದ್ಧ ದೋಷಾರೋಪಣೆಗಳನ್ನು ರೂಪಿಸುವಾಗ ಅವರ ವಿರುದ್ಧ ಕೊಲೆ ಯತ್ನದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ:ದೆಹಲಿ ಕಾರು ಅಪಘಾತ ಪ್ರಕರಣ : ಪೊಲೀಸ್​ ಬಂದೋಬಸ್ತ್​ನಲ್ಲಿ ಅಂಜಲಿ ಚಿತೆಗೆ ಅಗ್ನಿಸ್ಪರ್ಶ

ದೇಶವನ್ನೇ ಬೆಚ್ಚಿಬೀಳಿಸಿದ್ದ ಘಟನೆ:ಯುವತಿ ಅಂಜಲಿಯನ್ನು ಕಿಲೋಮೀಟರ್​​ಗಟ್ಟಲೇ ಎಳೆದೊಯ್ದಿದ್ದ ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. 2022ರ ಡಿಸೆಂಬರ್ 31 ಮತ್ತು 2023ರ ಜನವರಿ 1ರ ಮಧ್ಯರಾತ್ರಿಯಂದು ಸ್ಕೂಟಿಯಲ್ಲಿ ಅಂಜಲಿ ಸೇರಿ ಇಬ್ಬರು ಯುವತಿಯರು ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ, ಸುಲ್ತಾನ್‌ಪುರಿ ಪ್ರದೇಶದಲ್ಲಿ ಸ್ಕೂಟಿಗೆ ಕಾರಿನಿಂದ ಆರೋಪಿಗಳು ಡಿಕ್ಕಿ ಹೊಡೆದು ಸುಮಾರು 13 ಕಿ.ಮೀ. ಕಿಲೋಮೀಟರ್ ದೂರ ಅಂಜಲಿಯನ್ನು ಎಳೆದುಕೊಂಡು ಹೋಗಿದ್ದರು. ಈ ಘಟನೆ ಸಂಬಂಧ ದೆಹಲಿ ಪೊಲೀಸರು ಏಪ್ರಿಲ್ 1ರಂದು ಏಳು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಇಬ್ಬರು ಸಬ್ ಇನ್ಸ್​ಪೆಕ್ಟರ್​ಗಳು, ನಾಲ್ವರು ಅಸಿಸ್ಟೆಂಟ್​ ಸಬ್​ ಇನ್ಸ್​​ಪೆಕ್ಟರ್​ಗಳು, ನಾಲ್ವರು ಹೆಡ್ ಕಾನ್​ಸ್ಟೇಬಲ್​ಗಳು, ಓರ್ವ ಕಾನ್​ಸ್ಟೇಬಲ್ ಸೇರಿ 11 ಜನರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ, ಈ ಘಟನೆ ಸಂಬಂಧ ಡಿಸಿಪಿಗೆ ದೆಹಲಿ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ:ಕಾಂಜಾವಾಲಾ ಹಿಟ್​ ಅಂಡ್ ರನ್ ಪ್ರಕರಣ: 800 ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ

ABOUT THE AUTHOR

...view details