ಕರ್ನಾಟಕ

karnataka

ETV Bharat / bharat

ಮೋದಿ ಬಿಎ ಪದವಿ ಪ್ರಕರಣ: ಆರ್‌ಟಿಐ ಅರ್ಜಿ ತ್ವರಿತ ವಿಚಾರಣೆ ನಿರಾಕರಿಸಿದ ದೆಹಲಿ ಹೈಕೋರ್ಟ್ - ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಪ್ರಕರಣದ ತ್ವರಿತ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

By

Published : Jul 10, 2023, 5:23 PM IST

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಪ್ರಕರಣದ ತುರ್ತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಈ ಪ್ರಕರಣವನ್ನು ಅಕ್ಟೋಬರ್ 13 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

1978ರಲ್ಲಿ ಬಿಎ ಪಾಸಾದ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡುವಂತೆ ಕೇಂದ್ರೀಯ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯವು 2017ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ವಿಚಾರಣೆ ನಡೆಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಹೇಳಲಾಗಿದೆ. 2017 ರ ಜನವರಿ 24 ರಂದು ಮೊದಲ ವಿಚಾರಣೆಯ ದಿನಾಂಕಕ್ಕೆ ಆದೇಶವನ್ನು ತಡೆಹಿಡಿಯಲಾಗಿತ್ತು.

ಆರ್‌ಟಿಐ ಕಾರ್ಯಕರ್ತ ನೀರಜ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ಆರಂಭಿಕ ವಿಚಾರಣೆಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. ಕುಮಾರ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, ಈ ಪ್ರಕರಣವು ದೀರ್ಘವಾಗಿ ಬಾಕಿ ಉಳಿದಿದ್ದು, ಶೀಘ್ರ ವಿಚಾರಣೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದರು.

“ಈ ವಿಷಯವನ್ನು ಅಕ್ಟೋಬರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈಗಾಗಲೇ ನಿಗದಿಪಡಿಸಿದ ದಿನಾಂಕದಂದು ಪಟ್ಟಿ ಮಾಡಿ'' ಎಂದು ನ್ಯಾಯಮೂರ್ತಿ ಪ್ರಸಾದ್ ಹೇಳಿದ್ದಾರೆ.

ವಿವಾದದ ಬಗ್ಗೆ :ಆರ್‌ಟಿಐ ಕಾರ್ಯಕರ್ತ ನೀರಜ್ ಕುಮಾರ್ ಅವರು 1978 ರಲ್ಲಿ ಬಿಎಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರ ರೋಲ್ ಸಂಖ್ಯೆ, ಹೆಸರು, ಅಂಕಗಳು ಮತ್ತು ಫಲಿತಾಂಶ ಪಾಸ್ ಅಥವಾ ಅನುತ್ತೀರ್ಣಗೊಂಡಿರುವ ಮಾಹಿತಿ ನೀಡುವಂತೆ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದರು.

CIC ಮುಂದೆ ಮೇಲ್ಮನವಿ ಸಲ್ಲಿಸಿದ್ದ RTI ಕಾರ್ಯಕರ್ತ: ದೆಹಲಿ ವಿಶ್ವವಿದ್ಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (CPIO) ಮೂರನೇ ವ್ಯಕ್ತಿಯ ಮಾಹಿತಿಯಾಗಿ ಅರ್ಹತೆ ಪಡೆದಿದೆ ಎಂಬ ಆಧಾರದ ಮೇಲೆ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದರು. ಇದಾದ ನಂತರ RTI ಕಾರ್ಯಕರ್ತ CIC ಮುಂದೆ ಮೇಲ್ಮನವಿ ಸಲ್ಲಿಸಿದ್ದರು.

2016 ರಲ್ಲಿ ಅಂಗೀಕರಿಸಿದ ಆದೇಶದಲ್ಲಿ ಸಿಐಸಿ ಹೀಗೆ ಹೇಳಿತ್ತು.. ಪ್ರಕರಣದ ಸಮಾನಾರ್ಥಕ ಕಾನೂನುಗಳು ಮತ್ತು ಹಿಂದಿನ ತೀರ್ಪುಗಳನ್ನು ಪರಿಶೀಲಿಸಿದ ನಂತರ, ಆಯೋಗವು ವಿದ್ಯಾರ್ಥಿಯ (ಪ್ರಸ್ತುತ / ಹಿಂದಿನ) ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಸಾರ್ವಜನಿಕ ಡೊಮೇನ್‌ಗೆ ಸೇರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಪ್ರತಿ ವಿಶ್ವವಿದ್ಯಾನಿಲಯವು ಸಾರ್ವಜನಿಕ ಸಂಸ್ಥೆಯಾಗಿದೆ ಮತ್ತು ಎಲ್ಲಾ ಪದವಿ ಸಂಬಂಧಿತ ಮಾಹಿತಿಯು ವಿಶ್ವವಿದ್ಯಾನಿಲಯದ ಖಾಸಗಿ ರಿಜಿಸ್ಟರ್‌ನಲ್ಲಿ ಲಭ್ಯವಿದೆ. ಅದು ಸಾರ್ವಜನಿಕ ದಾಖಲೆಯಾಗಿದೆ ಎಂದು ಸಿಐಸಿ ಗಮನಿಸಿದೆ.

ವಿದ್ಯಾರ್ಥಿಗಳ ಮಾಹಿತಿ ಒದಗಿಸಲು ತೊಂದರೆಯಿಲ್ಲ: 'ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಥವಾ ಅನುತ್ತೀರ್ಣರಾದ ಒಟ್ಟು ಸಂಖ್ಯೆಯ ವಿದ್ಯಾರ್ಥಿಗಳ ಮಾಹಿತಿಯನ್ನು ಒದಗಿಸಲು ತನಗೆ ಯಾವುದೇ ತೊಂದರೆ ಇಲ್ಲ' ಎಂದು ದೆಹಲಿ ಹೈಕೋರ್ಟ್‌ನಲ್ಲಿ ದೆಹಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು 2017 ರಲ್ಲಿ ಮೊದಲ ವಿಚಾರಣೆಯ ದಿನಾಂಕದಂದು ಹೇಳಿದ್ದರು. ಆದಾಗ್ಯೂ ರೋಲ್ ಸಂಖ್ಯೆ, ತಂದೆಯ ಹೆಸರು ಮತ್ತು ಅಂಕಗಳೊಂದಿಗೆ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶಗಳ ವಿವರಗಳನ್ನು ಕೋರಿ ಸಲ್ಲಿಸಿದ ಅರ್ಜಿಯಲ್ಲಿ ಅಂತಹ ಮಾಹಿತಿಯನ್ನು ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ನೀಡಲಾಗಿದೆ ಎಂದು ವಿಶ್ವವಿದ್ಯಾಲಯವು ವಾದಿಸಿತ್ತು.

ಐವರು ನ್ಯಾಯಾಧೀಶರ ಮುಂದೆ ಪಟ್ಟಿ: ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಅವರು ಆದೇಶಕ್ಕೆ ತಡೆ ನೀಡಿದ ನಂತರ, ರೋಸ್ಟರ್‌ನಲ್ಲಿ ವಾಡಿಕೆಯ ಬದಲಾವಣೆಗಳಿಂದಾಗಿ ಈ ವಿಷಯವನ್ನು ಐವರು ನ್ಯಾಯಾಧೀಶರ ಮುಂದೆ ಪಟ್ಟಿ ಮಾಡಲಾಗಿದೆ.

ಫೆಬ್ರವರಿ 2019 ರಲ್ಲಿ ನ್ಯಾಯಮೂರ್ತಿ ಅನುಪ್ ಜೆ ಭಂಭಾನಿ ಅವರ ಮುಂದೆ ನಡೆದ ವಿಚಾರಣೆಯೊಂದರಲ್ಲಿ, ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1) (ಇ) ಮತ್ತು (ಜೆ) ಗಳ ವ್ಯಾಖ್ಯಾನದ ಕುರಿತ ಪ್ರಶ್ನೆಯನ್ನು ಎತ್ತುವ ಅರ್ಜಿಗಳ ಗುಂಪಿನೊಂದಿಗೆ ಈ ವಿಷಯವನ್ನು ಸಂಯೋಜಿಸಲಾಗಿದೆ. ಈ ನಿಬಂಧನೆಯು 'ಒಬ್ಬ ವ್ಯಕ್ತಿಗೆ ತನ್ನ ವಿಶ್ವಾಸಾರ್ಹ ಸಂಬಂಧದಲ್ಲಿ ಲಭ್ಯವಿರುವ ಮಾಹಿತಿ ಮತ್ತು ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯಿಂದ ವಿನಾಯಿತಿಗಳನ್ನು ನೀಡುತ್ತದೆ. ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಅಥವಾ ಇದು ಅನಧಿಕೃತ ಆಕ್ರಮಣವನ್ನು ಉಂಟುಮಾಡುತ್ತದೆ' ಎಂದು ನ್ಯಾಯಾಲಯವು ಗಮನಿಸಿದೆ.

ಇದನ್ನೂ ಓದಿ:15ನೇ ವಯಸ್ಸಿಗೆ ಪದವಿ ಪಡೆಯಲು ಹೊರಟಿರುವ ಬಾಲಕಿ: ಪ್ರಧಾನಿ ಭೇಟಿಯಾಗಿ ಹೇಳಿದ್ದೇನು ಗೊತ್ತಾ?

ABOUT THE AUTHOR

...view details