ಕರ್ನಾಟಕ

karnataka

ETV Bharat / bharat

ಕೇಂದ್ರೀಯ ವಿದ್ಯಾಲಯಗಳಲ್ಲಿ ವಿಕಲಚೇತನ ಮಕ್ಕಳಿಗೆ ವಿಶೇಷ ಶಿಕ್ಷಕರ ನೇಮಕ : ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​ - Special Educators in Kendriya Vidyalaya

ವಿಕಲಚೇತನ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಕ್ಷಕರ ನೇಮಕಾತಿ ಕುರಿತಂತೆ ವಕೀಲರಾದ ಅಶೋಕ್​ ಅಗರ್ವಾಲ್​ ಮತ್ತು ಕುಮಾರ್​ ಉತ್ಕರ್ಷ್​ ಎಂಬುವರು ಪಿಐಎಲ್​ ಸಲ್ಲಿಸಿದ್ದಾರೆ. ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಹಿಂದೆ ಬಿದ್ದಿಲ್ಲ ಎಂದು 2009ರಲ್ಲೇ ಕೆವಿಎಸ್​ ಹೇಳಿತ್ತು. ಆದರೂ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಕರ ನೇಮಕದ ಬಗ್ಗೆ ಯಾವುದೇ ದಿನವನ್ನು ನಿಗದಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ..

ಕೇಂದ್ರೀಯ ವಿದ್ಯಾಲಯ ಸಂಘಟನಾ
ಕೇಂದ್ರೀಯ ವಿದ್ಯಾಲಯ ಸಂಘಟನಾ

By

Published : Apr 11, 2022, 1:36 PM IST

ನವದೆಹಲಿ :ಕೇಂದ್ರೀಯ ವಿದ್ಯಾಲಯಗಳಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಕ್ಷಕರ ಹುದ್ದೆಗಳ ಸೃಷ್ಟಿ ಮತ್ತು ನೇಮಕಾತಿ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನಾ (ಕೆವಿಎಸ್​)ಗೆ ದೆಹಲಿಯ ಹೈಕೋರ್ಟ್​​ ಸೋಮವಾರ ನೋಟಿಸ್​ ಜಾರಿ ಮಾಡಿದೆ. ಈ ಸಂಬಂಧ ಎರಡು ವಾರದಲ್ಲಿ ತನ್ನ ಅಫಿಡವಿಟ್​ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿ ಗಡುವು ವಿಧಿಸಿದೆ.

ದೇಶದ ಪ್ರತಿ ಕೇಂದ್ರೀಯ ವಿದ್ಯಾಲಯದಲ್ಲಿ ವಿಶೇಷಚೇತನ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಶಿಕ್ಷಕರ ಹುದ್ದೆಗಳನ್ನು ಸೃಷ್ಟಿಸಬೇಕು. ನೇಮಕಾತಿ ನಿಯಮ ರೂಪಿಸಿ ಮತ್ತು ಪ್ರತಿ ಶಾಲೆಗೆ ಕನಿಷ್ಠ ಇಬ್ಬರು ವಿಶೇಷ ಶಿಕ್ಷಕರನ್ನು ನೇಮಿಸಿಕೊಳ್ಳಬೇಕೆಂದು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್​) ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಪಿನ್​ ಸಂಘಿ ಮತ್ತು ನವೀನ್ ಚಾವ್ಲಾ ನಡೆಸಿದರು. ಮುಂದಿನ ಎರಡು ವಾರದಲ್ಲಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಸದ್ಯ ಎಷ್ಟು ಜನ ವಿಶೇಷ ಶಿಕ್ಷಕರು ಇದ್ದಾರೆ ಮತ್ತು ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಅಫಿಡವಿಟ್​ ಸಲ್ಲಿಸುವಂತೆ ಕೇಂದ್ರ ಶಿಕ್ಷಣ ಇಲಾಖೆ ಹಾಗೂ ಕೆವಿಎಸ್​ಗೆ ನಿರ್ದೇಶನ ನೀಡಿದೆ.

ಪಿಐಎಲ್​ನಲ್ಲಿ ಏನಿದೆ? :ವಿಕಲಚೇತನ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಕ್ಷಕರ ನೇಮಕಾತಿ ಕುರಿತಂತೆ ವಕೀಲರಾದ ಅಶೋಕ್​ ಅಗರ್ವಾಲ್​ ಮತ್ತು ಕುಮಾರ್​ ಉತ್ಕರ್ಷ್​ ಎಂಬುವರು ಪಿಐಎಲ್​ ಸಲ್ಲಿಸಿದ್ದಾರೆ. ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಹಿಂದೆ ಬಿದ್ದಿಲ್ಲ ಎಂದು 2009ರಲ್ಲೇ ಕೆವಿಎಸ್​ ಹೇಳಿತ್ತು. ಆದರೂ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಕರ ನೇಮಕದ ಬಗ್ಗೆ ಯಾವುದೇ ದಿನವನ್ನು ನಿಗದಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಅಲ್ಲದೇ, ವಿಶೇಷ ಶಿಕ್ಷಕರ ಖಾಯಂ ಹುದ್ದೆಗಳನ್ನು ಸೃಷ್ಟಿ ಮಾಡಿಲ್ಲ. ನೇಮಕಾತಿ ನಿಯಮಗನ್ನೂ ರೂಪಿಸಿಲ್ಲ ಎಂದು ಪಿಐಎಲ್​ನಲ್ಲಿ ಹೇಳಲಾಗಿದೆ. ಜತೆಗೆ ದೆಹಲಿಯ 49 ಸೇರಿ ದೇಶದಾದ್ಯಂತ 1,239 ಕೇಂದ್ರೀಯ ವಿದ್ಯಾಲಯಗಳು ಇವೆ. 2011-22ನೇ ವಾರ್ಷಿಕ ವರದಿ ಪ್ರಕಾರ ಒಟ್ಟಾರೆ 13,89,995 ವಿದ್ಯಾರ್ಥಿಗಳು (7,58,100 ಬಾಲಕರು and 6,30,795 ಬಾಲಕಿಯರು) ಓದುತ್ತಿದ್ದಾರೆ. ಅಂದಾಜಿನ ಪ್ರಕಾರ 5,701 ವಿಕಲಚೇತನ ಮಕ್ಕಳು ಇದ್ದಾರೆ. ಆದರೂ, ವಿಶೇಷ ಶಿಕ್ಷಕರ ನೇಮಕದ ಬಗ್ಗೆ ಕೇಂದ್ರೀಯ ವಿದ್ಯಾಲಯ ಸಂಘಟನಾ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪಿಐಎಲ್​ನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ ಆರೋಪ: ರ್‍ಯಾಂಕ್‌ ಪಡೆದಿದ್ದ ಕಲಬುರಗಿಯ ಅಭ್ಯರ್ಥಿ ಸಿಐಡಿ ವಶಕ್ಕೆ

ABOUT THE AUTHOR

...view details