ನವದೆಹಲಿ :ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರ ಪೆರೋಲ್‌ನ ದೆಹಲಿ ಹೈಕೋರ್ಟ್ ಮೇ 17ರವರೆಗೆ ವಿಸ್ತರಿಸಿದೆ.
ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌತಾಲಾ ಅವರ ಅಕಾಲಿಕ ಬಿಡುಗಡೆಯ ಮೂಲ ಕಡತ ತರಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ದೆಹಲಿ ಸರ್ಕಾರ ಪರಿಗಣಿಸಿರುವ ಚೌತಾಲಾ ಅವರ ಅಕಾಲಿಕ ಬಿಡುಗಡೆಯ ಮೂಲ ಕಡತ ತರಲು ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ಅನುಪ್ ಜೈರಾಮ್ ಭಂಭಾನಿ ಅವರ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಚೌಟಾಲಾ ಪರ ಹಾಜರಾದ ವಕೀಲ ಅಮಿತ್ ಸಾಹ್ನಿ ಅವರು ಅರ್ಜಿದಾರರಿಗೆ ನೀಡದ ಮಾರ್ಚ್ 8, 2021ರ ಕೊನೆಯ ಆದೇಶದ ಪ್ರಕಾರ ಸಲ್ಲಿಸಬೇಕಾದ ಅಫಿಡವಿಟ್ ನಕಲನ್ನು ಸಲ್ಲಿಸಿದರು.
ಓದಿ:ವಾಯುನೆಲೆಗಳ ರಕ್ಷಣೆಗೆ ಲೈಟ್ ಬುಲೆಟ್ ಪ್ರೂಫ್ ವೆಹಿಕಲ್ಸ್ ಬಲ
86 ವರ್ಷದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾ ಅವರು ತಮ್ಮ ವಕೀಲ ಅಮಿತ್ ಸಾಹ್ನಿ ಅವರ ಮೂಲಕ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಂಪೂರ್ಣ ಜೈಲುವಾಸ ಅನುಭವಿಸಿದ್ದಾರೆ. 2000ರಲ್ಲಿ 3,206 ಕಿರಿಯ ಶಿಕ್ಷಕರನ್ನು (ಜೆಬಿಟಿ) ಅಕ್ರಮವಾಗಿ ನೇಮಕ ಮಾಡಿದ ಪ್ರಕರಣದಲ್ಲಿ ಒಪಿ ಚೌತಲಾ ಮತ್ತು ಇತರರಿಗೆ ಶಿಕ್ಷೆ ವಿಧಿಸಲಾಗಿತ್ತು.