ಕರ್ನಾಟಕ

karnataka

ETV Bharat / bharat

ವೈವಾಹಿಕ ಅತ್ಯಾಚಾರ ವಿಚಾರ: ಭಿನ್ನ ತೀರ್ಪುನೀಡಿದ ದೆಹಲಿ ಹೈಕೋರ್ಟ್​​​​​! - ಐಪಿಸಿ 375 (ಅತ್ಯಾಚಾರ) ಅಡಿಯಲ್ಲಿ ವೈವಾಹಿಕ ಅತ್ಯಾಚಾರ ವಿನಾಯಿತಿಯ ಸಾಂವಿಧಾನಿಕತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ

ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದರ್​​ ಮತ್ತು ಜಸ್ಟಿಸ್ ಹರಿ ಶಂಕರ್ ಅವರು ನೀಡಿದ ತೀರ್ಪಿನಲ್ಲಿ ಭಿನ್ನತೆ ಇದೆ. ವೈವಾಹಿಕ ಅತ್ಯಾಚಾರ ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ತಾನು ನಂಬಿದ್ದೇನೆ ಎಂದು ನ್ಯಾಯಮೂರ್ತಿ ಹರಿ ಶಂಕರ್ ಅಭಿಪ್ರಾಯಪಟ್ಟಿದ್ದರೆ, ಇನ್ನೊಬ್ಬ ನ್ಯಾಯಮೂರ್ತಿ ರಾಜೀವ್ ಶಕ್ಧರ್ ಅವರು ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ರದ್ದುಗೊಳಿಸುವ ಬಗ್ಗೆ ಒಲವು ತೋರಿದ್ದಾರೆ.

ವೈವಾಹಿಕ ಅತ್ಯಾಚಾರ ಅಪರಾಧೀಕರಣ: ಭಿನ್ನ ತೀರ್ಪುನೀಡಿದ ದೆಹಲಿ ಹೈಕೋರ್ಟ್​​​​​!
ವೈವಾಹಿಕ ಅತ್ಯಾಚಾರ ಅಪರಾಧೀಕರಣ: ಭಿನ್ನ ತೀರ್ಪುನೀಡಿದ ದೆಹಲಿ ಹೈಕೋರ್ಟ್​​​​​!

By

Published : May 11, 2022, 10:09 PM IST

ನವದೆಹಲಿ:ಪತ್ನಿಯೊಂದಿಗಿನ ಬಲವಂತದ ಲೈಂಗಿಕತೆಗೆ ವಿನಾಯಿತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್​​ 375 ನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಬುಧವಾರ ಬೇರೆ ಬೇರೆ ನಿಲುವು ಹೊಂದಿರುವ ತೀರ್ಪು ನೀಡಿದೆ.

ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದರ್​​ ಮತ್ತು ಜಸ್ಟಿಸ್ ಹರಿ ಶಂಕರ್ ಅವರು ನೀಡಿದ ತೀರ್ಪಿನಲ್ಲಿ ಭಿನ್ನತೆ ಇದೆ. ವೈವಾಹಿಕ ಅತ್ಯಾಚಾರ ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ತಾನು ನಂಬಿದ್ದೇನೆ ಎಂದು ನ್ಯಾಯಮೂರ್ತಿ ಹರಿ ಶಂಕರ್ ಅಭಿಪ್ರಾಯಪಟ್ಟಿದ್ದರೆ, ಇನ್ನೊಬ್ಬ ನ್ಯಾಯಮೂರ್ತಿ ರಾಜೀವ್ ಶಕ್ಧರ್ ಅವರು ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ರದ್ದುಗೊಳಿಸುವ ಬಗ್ಗೆ ಒಲವು ತೋರಿದ್ದಾರೆ.

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠ, ಅತ್ಯಾಚಾರ ಕಾನೂನಿನಡಿಯಲ್ಲಿ ಗಂಡಂದಿರಿಗೆ ನೀಡಲಾದ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ತೀರ್ಪು ಕಾಯ್ದಿರಿಸಿತ್ತು. ಕಾಯ್ದಿರಿಸಿ ತೀರ್ಪನ್ನು ಇಂದು ಪ್ರಕಟಿಸಿದ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಕ್ಷಿದಾರರಿಗೆ ಅನುಮತಿಯನ್ನೂ ನೀಡಿದೆ.

ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿರುವ ಕಾರಣ, ವೈವಾಹಿಕ ಅತ್ಯಾಚಾರ ಸಂಬಂಧಿಸಿದ ಪ್ರಕರಣ ದೆಹಲಿ ಹೈಕೋರ್ಟಿನ ತ್ರಿ ಸದಸ್ಯ ಪೀಠಕ್ಕೆ ವರ್ಗಾವಣೆಯಾಗಬಹುದು ಅಥವಾ ಸುಪ್ರೀಮ್‌ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ.

ಏನಿದು ಕೇಸ್​: ಐಪಿಸಿ 375 (ಅತ್ಯಾಚಾರ) ಅಡಿಯಲ್ಲಿ ವೈವಾಹಿಕ ಅತ್ಯಾಚಾರ ವಿನಾಯಿತಿಯ ಸಾಂವಿಧಾನಿಕತೆ ಪ್ರಶ್ನಿಸಲಾಗಿತ್ತು. ಇದು ತಮ್ಮ ಪತಿಯಿಂದ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ವಿವಾಹಿತ ಮಹಿಳೆಯರ ವಿರುದ್ಧ ತಾರತಮ್ಯ ಹೊಂದಿದೆ. ಐಪಿಸಿಯ ಸೆಕ್ಷನ್ 375 ರಲ್ಲಿ ನೀಡಿರುವ ವಿನಾಯಿತಿಯ ಅಡಿಯಲ್ಲಿ, ಪುರುಷನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳನ್ನು ನಡೆಸುವುದು, ಹೆಂಡತಿ ಅಪ್ರಾಪ್ತಳಲ್ಲದಿರುವುದು ಅತ್ಯಾಚಾರವಲ್ಲ ಎಂಬುದು ಸರಿಯಲ್ಲ ಎಂದು ಪ್ರಶ್ನಿಸಲಾಗಿತ್ತು.

ಭಾರತೀಯ ಅತ್ಯಾಚಾರ ಕಾನೂನಿನಡಿ ಗಂಡಂದಿರಿಗೆ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕೋರಿ ಎನ್‌ಜಿಒಗಳಾದ ಆರ್‌ಐಟಿ ಫೌಂಡೇಶನ್, ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್​​ ಸಲ್ಲಿಸಿದ ಪಿಐಎಲ್‌ಗಳ ಮೇಲೆ ನ್ಯಾಯಾಲಯದ ತೀರ್ಪು ಹೊರ ಬಂದಿದೆ. 2017 ರ ಅಫಿಡವಿಟ್‌ನಲ್ಲಿ, ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲಾಗುವುದಿಲ್ಲ ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ಹೇಳಿತ್ತು.

ಇದನ್ನು ಓದಿ:20 ನಾಯಿಗಳೊಂದಿಗೆ ಕೋಣೆಯಲ್ಲಿ ಬಂಧಿಯಾಗಿದ್ದ ಬಾಲಕ: ಇಷ್ಟಕ್ಕೂ ಅವನನ್ನು ಇಲ್ಲಿರಿಸಿದ್ದೇಕೆ?

ABOUT THE AUTHOR

...view details