ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತೊಂದು ಹೊಸ ಯೋಜನೆಯನ್ನು ಘೋಷಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂಗ್ಲಿಷ್ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ 50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.
ಆನ್‌ಲೈನ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ಮೊದಲ ಹಂತದಲ್ಲಿ ನಾವು ಸ್ಪೋಕನ್ ಇಂಗ್ಲಿಷ್ ಕೋರ್ಸ್ ಅನ್ನು 50 ಕೇಂದ್ರಗಳಲ್ಲಿ ಪ್ರಾರಂಭಿಸುತ್ತೇವೆ. ಅಲ್ಲಿ ಒಂದು ಲಕ್ಷ ಜನರು ಪ್ರವೇಶ ನೀಡಲಾಗುತ್ತಿದ್ದು, 18ರಿಂದ 35 ವರ್ಷ ವಯಸ್ಸಿನವರು ಮತ್ತು 12ನೇ ತರಗತಿ ಉತ್ತೀರ್ಣರಾದವರು ಇದರ ಈ ಕೋರ್ಸ್ಗೆ ಸೇರಬಹುದು. ಈ ಕೋರ್ಸ್ ಜನರ ಇಂಗ್ಲಿಷ್ ಸಂವಹನ ಕೌಶಲ್ಯ ಸುಧಾರಿಸುವುದರೊಂದಿಗೆ ಉದ್ಯೋಗ ಪಡೆಯಲು ಮತ್ತು ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಅನುಕೂಲವಾಗಿದೆ ಎಂದು ತಿಳಿಸಿದರು.
950 ರೂ. ಠೇವಣಿ ಇಡಬೇಕು: ಈ ಕೋರ್ಸ್ಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಆರಂಭದಲ್ಲಿ 950 ರೂಪಾಯಿಗಳನ್ನು ಭದ್ರತಾ ಹಣವಾಗಿ ಠೇವಣಿ ಮಾಡಬೇಕಾಗುತ್ತದೆ ಎಂದೂ ಕೇಜ್ರಿವಾಲ್ ಮಾಹಿತಿ ನೀಡಿದರು. ಸಂಪೂರ್ಣ ಹಾಜರಾತಿಯೊಂದಿಗೆ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಠೇವಣಿ ಹಣವನ್ನು ಮರುಪಾವತಿಸಲಾಗುತ್ತದೆ ಎಂದು ಸಿಎಂ ಕೇಜ್ರಿವಾಲ್ ಸ್ಪಪ್ಟಪಡಿಸಿದರು.