ಕರ್ನಾಟಕ

karnataka

ಜನವರಿ 1 ರಿಂದ ಸರ್ಕಾರಿ ಶಾಲೆಗಳಿಗೆ ಚಳಿಗಾಲದ ರಜೆ

By

Published : Dec 23, 2022, 8:43 AM IST

ದೆಹಲಿಯ ಸರ್ಕಾರಿ ಶಾಲೆಗಳಿಗೆ ಜನವರಿ 1ರಿಂದ 15 ರವರೆಗೆ ಚಳಿಗಾಲದ ರಜೆ ನೀಡಿ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ.

SCHOOL
ಶಾಲೆ

ನವದೆಹಲಿ: ಚಳಿಗಾಲದ ರಜೆಗಾಗಿ ದೆಹಲಿಯ ಎಲ್ಲ ಸರ್ಕಾರಿ ಶಾಲೆಗಳು ಜನವರಿ 1 ರಿಂದ ಎರಡು ವಾರಗಳವರೆಗೆ ಮುಚ್ಚಲ್ಪಡುತ್ತವೆ ಎಂದು ಶಿಕ್ಷಣ ನಿರ್ದೇಶನಾಲಯ ಗುರುವಾರ ಆದೇಶ ಹೊರಡಿಸಿದೆ.

"ಚಳಿಗಾಲದ ಹಿನ್ನೆಲೆ ಶಿಕ್ಷಣ ನಿರ್ದೇಶನಾಲಯದ ಅಡಿ ಬರುವ ಎಲ್ಲಾ ಸರ್ಕಾರಿ ಶಾಲೆಗಳು ಜನವರಿ 1, 2023 ರಿಂದ ಜನವರಿ 15, 2023 ರವರೆಗೆ ಮುಚ್ಚಲ್ಪಡುತ್ತವೆ. ಆದ್ರೆ, ಪಠ್ಯಕ್ರಮಗಳನ್ನು ಪರಿಷ್ಕರಿಸಲು ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟದ ಶೈಕ್ಷಣಿಕ ಕಾರ್ಯಕ್ಷಮತೆ ಹೆಚ್ಚಿಸಲು 9 ನೇ ತರಗತಿಯಿಂದ 12 ನೇ ತರಗತಿಯವರಿಗೆ ಪರಿಹಾರ ತರಗತಿಗಳನ್ನು ನಡೆಸಲಾಗುವುದು" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅದರಂತೆ ಈ ತರಗತಿಗಳು ಜನವರಿ 2 ರಿಂದ ಜನವರಿ 14 ರವರೆಗೆ ನಡೆಯಲಿದೆ. ಪರಿಹಾರ ತರಗತಿಗಳನ್ನು ಪರೀಕ್ಷಾ ದೃಷ್ಟಿಕೋನದಿಂದ ನಡೆಸಲಾಗುತ್ತದೆ. ಅಲ್ಲದೇ ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿವೆ. ಆದಾಗ್ಯೂ, ಸ್ಥಳಾವಕಾಶದ ಕೊರತೆಯಿದ್ದರೆ, ಸಂಜೆ ಪಾಳಿಯ ಶಾಲೆಗಳ ಮುಖ್ಯಸ್ಥರು ಸಂಬಂಧಪಟ್ಟ ಶಿಕ್ಷಣದ ಉಪ ನಿರ್ದೇಶಕರನ್ನು (ಡಿಡಿಇ) ಸಂಪರ್ಕಿಸಬೇಕು, ಜಿಲ್ಲೆ ಮತ್ತು ಶಾಲೆಗೆ ಅನುಗುಣವಾಗಿ ಸಂಜೆ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಒಂಟಿ ತಾಯಿಯ ಮಗಳೆಂದು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಶಾಲೆ: ಮಹಿಳೆಯ ಗಂಭೀರ ಆರೋಪ

ABOUT THE AUTHOR

...view details