ಕರ್ನಾಟಕ

karnataka

ETV Bharat / bharat

ಸರ್ಕಾರಿ ಶಾಲೆಗಳಲ್ಲಿ ಫೋನ್​ ಬಳಕೆಗೆ ನಿರ್ಬಂಧ ಹೇರಿದ ಸರ್ಕಾರ - ಶಿಕ್ಷಕರು ಮತ್ತು ಇತರ ಸಿಬ್ಬಂದಿ

ದೆಹಲಿ ಸರ್ಕಾರ ಶಾಲೆಗಳಲ್ಲಿ ಮೊಬೈಲ್ ಫೋನ್​ ಬಳಕೆ ನಿಷೇಧ ಮಾಡಿ ಆದೇಶ ಹೊರಡಿಸಿದೆ.

Delhi Govt restricts use of mobile phones in schools
ಸರ್ಕಾರಿ ಶಾಲೆಗಳಲ್ಲಿ ಫೋನ್​ ಬಳಕೆ ನಿಷೇಧ.. ಸರ್ಕಾರದ ಆದೇಶ

By

Published : Aug 11, 2023, 6:39 AM IST

Updated : Aug 11, 2023, 8:41 AM IST

ನವದೆಹಲಿ: ಶಾಲಾ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ವಿಧಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿಕ್ಷಣ ನಿರ್ದೇಶನಾಲಯ ನೀಡಿರುವ ಸಲಹೆಯ ಅನ್ವಯ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಪೋಷಕರು ತಮ್ಮ ಮಕ್ಕಳು ಶಾಲಾ ಆವರಣದೊಳಗೆ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ಫೋನ್ ತಂದರೆ, ಶಾಲಾ ಅಧಿಕಾರಿಗಳು ಸಮರ್ಪಕ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಲಾಕರ್‌ಗಳು ಹಾಗೂ ಶಾಲೆಗಳಲ್ಲಿ ಇರುವ ಇನ್ನಿತರ ವ್ಯವಸ್ಥೆ - ಇತ್ಯಾದಿಗಳನ್ನು ಬಳಸಿಕೊಂಡು ಮಕ್ಕಳ ಮೊಬೈಲ್​ಗಳನ್ನು ಸುರಕ್ಷಿತ ರೀತಿ ಸಂರಕ್ಷಿಸಲು ವ್ಯವಸ್ಥೆ ಮಾಡಬೇಕು. ಈ ಉದ್ದೇಶದಿಂದಲೇ ನಿರ್ಬಂಧ ಜಾರಿಗೆ ತರಲಾಗಿದೆ ಎಂದು ದೆಹಲಿ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೋಧನೆ ಮತ್ತು ಕಲಿಕಾ ಚಟುವಟಿಕೆಗಳು ನಡೆಯುವ ತರಗತಿಗಳು, ಆಟದ ಮೈದಾನ, ಪ್ರಯೋಗಾಲಯ ಮತ್ತು ಗ್ರಂಥಾಲಯಗಳಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸುವಂತೆ ಸಂಬಂಧ ಪಟ್ಟ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶಿಕ್ಷಣ ನಿರ್ದೇಶನಾಲಯ ಈ ಸಲಹೆ ಸೂಚನೆ ನೀಡಿದೆ.

ಮಕ್ಕಳು ಮೊಬೈಲ್​ ಬಳಸದಂತೆ ಎಚ್ಚರಿಕೆ ವಹಿಸಿ:ಶಿಕ್ಷಕರು ಮತ್ತು ಇತರ ಸಿಬ್ಬಂದಿ ಬೋಧನೆ ಮತ್ತು ಕಲಿಕಾ ಚಟುವಟಿಕೆಗಳಲ್ಲಿ ಅಂದರೆ ಆಯಾಯ ತರಗತಿಗಳು, ಆಟದ ಮೈದಾನಗಳು, ಪ್ರಯೋಗಾಲಯಗಳು ಮತ್ತು ಗ್ರಂಥಾಲಯ ಇತ್ಯಾದಿಗಳಲ್ಲಿ ಮೊಬೈಲ್ ಫೋನ್​ ಬಳಸುವುದನ್ನು ತಡೆಯಬೇಕು ಎಂದು ಶಿಕ್ಷಣ ನಿರ್ದೇಶನಾಲಯ ಹೇಳಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ತುರ್ತು ಸಂದರ್ಭದಲ್ಲಿ ಕರೆ ಮಾಡಬಹುದಾದ ಸಹಾಯವಾಣಿ ಸಂಖ್ಯೆಗಳನ್ನು ಒದಗಿಸುವಂತೆ ಶಿಕ್ಷಣ ನಿರ್ದೇಶನಾಲಯ ಶಾಲಾ ಅಧಿಕಾರಿಗಳಿಗೆ ಸೂಚಿಸಿದೆ.

ಪರ್ಯಾಯವಾಗಿ ಸಹಾಯವಾಣಿ ವ್ಯವಸ್ಥೆ ಮಾಡಿ:ಶಾಲಾ ಮೇಲ್ವಿಚಾರಕರು, ಪೋಷಕರು, ವಿದ್ಯಾರ್ಥಿಗಳಿಗೆ ಸಾಕಷ್ಟು ಮೀಸಲಾದ ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಅಲ್ಲಿಂದ ವಿದ್ಯಾರ್ಥಿಗಳು ಕರೆಗಳನ್ನು ಸ್ವೀಕರಿಸಬಹುದು ಮತ್ತು ಮಾಡಬಹುದು. ಅದರಂತೆ, ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಸ್ಥರು ಮತ್ತು ಎಲ್ಲ ಖಾಸಗಿ ಅನುದಾನರಹಿತ ಹಾಗೂ ಅನುದಾನಿತ ಮಾನ್ಯತೆ ಪಡೆದ ಶಾಲೆಗಳ ವ್ಯವಸ್ಥಾಪಕರು ಈ ಮೂಲಕ ಮೇಲಿನ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಲುಪಿಸಬೇಕು. ಮತ್ತು ಆಯಾಯ ಶಾಲೆಗಳಲ್ಲಿ ಕೆಲಸ ಮಾಡುವ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಈ ಸೂಚನೆಯನ್ನು ತಲುಪಿಸಬೇಕು ಎಂದು ದೆಹಲಿ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತರಗತಿಗಳ ಅವಧಿಯಲ್ಲಿ ಮೊಬೈಲ್​ ಫೋನ್ ಬಳಕೆ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಚೀನಾದಲ್ಲಿ ಅಲ್ಲಿನ ಸರ್ಕಾರ, ಮಕ್ಕಳು ಫೋನ್​​ ನೋಡದಂತೆ ನಿರ್ಬಂಧ ವಿಧಿಸಿದೆ. ಮೊಬೈಲ್​ ಬಳಕೆ ಮಕ್ಕಳ ಆರೋಗ್ಯದ ಮೇಲೆ ಅದರಲ್ಲೂ ಕಣ್ಣಿನ ಮೇಲೆ ಪ್ರಭಾವ ಬೀರುವುದರಿಂದ ಅಲ್ಲಿನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇದನ್ನು ಓದಿ:ಮಾನನಷ್ಟ ಮೊಕದ್ದಮೆ: ಸಮನ್ಸ್​ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋದ ಕೇಜ್ರಿವಾಲ್​

Last Updated : Aug 11, 2023, 8:41 AM IST

ABOUT THE AUTHOR

...view details