ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಅವಶ್ಯಕತೆಗಿಂತ 4 ಪಟ್ಟು ಹೆಚ್ಚು ಆಮ್ಲಜನಕ ಸಂಗ್ರಹ: ಆಡಿಟ್ ಸಮಿತಿ - ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸರ್ಕಾರವು ಅನೇಕ ಸ್ಥಳಗಳಲ್ಲಿ ಆಮ್ಲಜನಕದ ಬಳಕೆಯ ಬಗ್ಗೆ ತಪ್ಪು ಅಂಕಿಅಂಶಗಳನ್ನು ನೀಡುತ್ತಿದೆ ಎಂದು ಲೆಕ್ಕಪರಿಶೋಧನಾ ಸಮಿತಿ ಆರೋಪಿಸಿದೆ.

Delhi govt exaggerated oxygen requirement by four times: Audit committee
ದೆಹಲಿಯಲ್ಲಿ ಅವಶ್ಯಕತೆಗಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕ ಸಂಗ್ರಹ: ಆಡಿಟ್ ಸಮಿತಿ

By

Published : Jun 25, 2021, 12:17 PM IST

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವೇಳೆ ಅಗತ್ಯವಿರುವ ಆಮ್ಲಜನಕಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕ ಸಂಗ್ರಹಣೆ ಮಾಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಸುಪ್ರೀಂಕೋರ್ಟ್ ನೇಮಿಸಿದ ಲೆಕ್ಕಪರಿಶೋಧನಾ ಸಮಿತಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ದೆಹಲಿ ಹೆಚ್ಚು ಆಮ್ಲಜನಕ ಸಂಗ್ರಹಣೆ ಮಾಡಿದ ಕಾರಣದಿಂದಾಗಿ ಬೇರೆ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಾಗಲು ಕಾರಣವಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ. ದೆಹಲಿ ಸರ್ಕಾರವು ಅನೇಕ ಸ್ಥಳಗಳಲ್ಲಿ ಆಮ್ಲಜನಕದ ಬಳಕೆಯ ಬಗ್ಗೆ ತಪ್ಪು ಅಂಕಿಅಂಶಗಳನ್ನು ನೀಡುತ್ತಿದೆ ಎಂದು ಲೆಕ್ಕಪರಿಶೋಧನಾ ಸಮಿತಿ ಆರೋಪಿಸಿದೆ.

ಲೆಕ್ಕಪರಿಶೋಧನಾ ಸಮಿತಿಯು ಆಮ್ಲಜನಕದ ಅವಶ್ಯಕತೆ ಎಷ್ಟಿದೆ ಎಂದು ತಿಳಿಸಲು ದೆಹಲಿಯ 260 ಆಸ್ಪತ್ರೆಗಳಿಗೆ ಸೂಚನೆ ನೀಡಿತ್ತು. ನಂತರ ಬಂದ ಎಲ್ಲಾ ಪ್ರಮುಖ ಆಸ್ಪತ್ರೆಗಳು ಸೇರಿದಂತೆ ಸುಮಾರು 183 ಆಸ್ಪತ್ರೆಗಳ ಡೇಟಾವನ್ನು ವಿಶ್ಲೇಷಣೆ ಮಾಡಿದಾಗ ಕೇವಲ 289 ಮೆಟ್ರಿಕ್ ಟನ್ ಮಾತ್ರ ಬಳಕೆಯಾಗಿರುವುದು ತಿಳಿದುಬಂದಿದೆ. ಆದರೆ ಸರ್ಕಾರ 1,140 ಮೆಟ್ರಿಕ್ ಟನ್ ಆಮ್ಲಜನಕ ಬಳಸಿಕೊಳ್ಳಲಾಗಿದೆ ಎಂದು ಹೇಳಿತ್ತು.

ಇದನ್ನೂ ಓದಿ:7 ಬಾರಿ ಗರ್ಭಪಾತ.. ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಗೆ ವಿಷವುಣಿಸಿದ ಪ್ರಿಯಕರ

ಐಸಿಯು ಹಾಸಿಗೆಗಳು ಅವಶ್ಯಕತೆ ಕಡಿಮೆ ಇದ್ದರೂ, ಹೆಚ್ಚು ಅವಶ್ಯಕತೆ ಇತ್ತು ಎಂದು ಹೇಳಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ದೇಶಾದ್ಯಂತ ಇರುವ ಗೊಂದಲಗಳನ್ನು ಸರಿಪಡಿಸಲು ಸೂಚನೆ ನೀಡಿದ್ದಾರೆ.

ABOUT THE AUTHOR

...view details