ಕರ್ನಾಟಕ

karnataka

By

Published : Dec 1, 2021, 3:20 PM IST

ETV Bharat / bharat

ದೆಹಲಿಯಲ್ಲಿ ಪೆಟ್ರೋಲ್​ ದರ 8 ರೂಪಾಯಿ ಇಳಿಕೆ.. ಮಧ್ಯರಾತ್ರಿಯಿಂದಲೇ ಜಾರಿ..

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ತೈಲ ಬೆಲೆಯಲ್ಲಿ 8 ರೂಪಾಯಿ ಕಡಿತಗೊಳ್ಳಲಿದೆ. ಕೇಜ್ರಿವಾಲ್​ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ವೇಳೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ..

delhi government reduced vat on petrol
delhi government reduced vat on petrol

ನವದೆಹಲಿ :ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಪ್​ ಸರ್ಕಾರ ದೆಹಲಿಯವಾಹನ ಸವಾರರಿಗೆ ಗುಡ್​ನ್ಯೂಸ್​ ನೀಡಿದೆ. ಪೆಟ್ರೋಲ್​​ ಮೇಲಿನ ವ್ಯಾಟ್‌ನ ಶೇ. 30ರಿಂದ ಶೇ. 19.40ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ರಾಜಧಾನಿಯಲ್ಲಿ ಪೆಟ್ರೋಲ್​ ಬೆಲೆ 8 ರೂಪಾಯಿ ಇಳಿಕೆಯಾಗಲಿದೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೊಳ್ಳಲಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್​ ಹಾಗೂ ಡೀಸೆಲ್​ ಮೇಲಿನ ಸುಂಕ ಕಡಿತಗೊಳಿಸಿ ಆದೇಶಿಸಿತ್ತು.

ಹೀಗಾಗಿ, ಬಿಜೆಪಿ ಆಡಳಿತವಿರುವ ಕರ್ನಾಟಕ, ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ತೈಲ ಬೆಲೆ ಮೇಲಿನ ವ್ಯಾಟ್​​ ಕಡಿಮೆ ಮಾಡಿದ್ದವು. ಇದೀಗ ದೆಹಲಿ ಕೇಜ್ರಿವಾಲ್​ ಸರ್ಕಾರ ಕೂಡ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿರಿ:'See You On The Other Side' : ಪಂಜಾಬ್​​ ಕಿಂಗ್ಸ್​​​ನಿಂದ ಬೇರ್ಪಟ್ಟ ಕೆ ಎಲ್ ರಾಹುಲ್​ ಮೊದಲ ಟ್ವೀಟ್​​

ದೆಹಲಿಯಲ್ಲಿ ಈವರೆಗೆ ಪೆಟ್ರೋಲ್​ ಬೆಲೆ ಲೀಟರ್​ಗೆ 103.97 ರೂ.ಇತ್ತು. ಇದೀಗ 8 ರೂಪಾಯಿ ಕಡಿತಗೊಂಡಿರುವ ಕಾರಣ 95.97ರೂ.ಗೆ ಇಳಿಕೆಯಾಗಿದೆ. ಈ ಮೂಲಕ ವಾಹನ ಸವಾರರು ಸ್ವಲ್ಪ ಮಟ್ಟದ ನಿಟ್ಟುಸಿರು ಬಿಡುವಂತೆ ಆಗಿದೆ.

ABOUT THE AUTHOR

...view details