ಹರಿದ್ವಾರ(ಉತ್ತರಾಖಂಡ): ದೆಹಲಿ ಮೂಲದ ಯುವತಿಯೋರ್ವಳ ಮೇಲೆ ಹರಿದ್ವಾರದಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಸಭೆಯ ಹೆಸರಿನಲ್ಲಿ ಆಕೆಯನ್ನು ಕರೆದುಕೊಂಡು ಬಂದಿರುವ ಕಂಪೆನಿಯ ಮುಖ್ಯಸ್ಥ ಹಾಗೂ ಆತನ ಸ್ನೇಹಿತರು ಸೇರಿಕೊಂಡು ದುಷ್ಕೃತ್ಯವೆಸಗಿದ್ದಾರೆಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಿದ್ವಾರದ ಫ್ಲಾಟ್ವೊಂದರಲ್ಲಿ ಘಟನೆ ನಡೆದಿದೆ. ಮದ್ಯದಲ್ಲಿ ಅಮಲು ಬರುವ ಪದಾರ್ಥ ಬೆರೆಸಿ, ಯುವತಿಗೆ ಕುಡಿಸಿದ್ದಾರೆ. ಆಕೆ ಮೂರ್ಛೆ ಹೋಗಿದ್ದು, ಅತ್ಯಾಚಾರವೆಸಗಿದ್ದಾರೆ. ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಕೋಟ್ವಾಲಿ ರಾಣಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕೊತ್ವಾಲಿ ರಾಣಿಪುರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಜಾಫ್ಗಢದ ಯುವತಿ ದೆಹಲಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 27 ರಂದು ಸಂಸ್ಥೆಯ ಮುಖ್ಯಸ್ಥ ಅನಿಲ್ ಠಾಕೂರ್ ಹಾಗೂ ಸಹ ಸಿಬ್ಬಂದಿ ರಾಹುಲ್ ಹಾಗೂ ಇತರೆ ಸ್ನೇಹಿತರೊಂದಿಗೆ ಕೆಲಸದ ನಿಮಿತ್ಯ ಯುವತಿ ಹರಿದ್ವಾರಕ್ಕೆ ಬಂದಿದ್ದರು.