ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಮತ್ತೆ ನಾಲ್ವರಿಗೆ ಒಮಿಕ್ರಾನ್‌ ಸೋಂಕು; ಮೊದಲ ಸೋಂಕಿತ ಆಸ್ಪತ್ರೆಯಿಂದ ಡಿಸ್ಚಾರ್ಜ್​

Delhi four patient of Omicron: ದೆಹಲಿಯಲ್ಲಿ ಇಂದು ನಾಲ್ವರಲ್ಲಿ ಕೋವಿಡ್‌ನ ರೂಪಾಂತರಿ ಒಮಿಕ್ರಾನ್‌ ಸೋಂಕು ಪಾಸಿಟೀವ್‌ ಬಂದಿದ್ದು, ಸೋಂಕಿತ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

Delhi first patient of Omicron variant of COVID-19 discharged from hospital Officials
ರಾಷ್ಟ್ರ ರಾಜಧಾನಿಗೂ ರೂಪಾಂತರಿ ಒಮಿಕ್ರಾನ್‌ ಎಂಟ್ರಿ; ದೆಹಲಿಯಲ್ಲಿ 2 ಪ್ರಕರಣಗಳು ಪತ್ತೆ

By

Published : Dec 14, 2021, 12:47 PM IST

Updated : Dec 14, 2021, 4:50 PM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ರೂಪಾಂತರಿಯ ತಲ್ಲಣ ಮುಂದುವರೆದಿದ್ದು, ದೆಹಲಿಯಲ್ಲಿಂದು ಹೊಸದಾಗಿ ನಾಲ್ವರಲ್ಲಿ ಒಮಿಕ್ರಾನ್‌ ಸೋಂಕು ಪತ್ತೆಯಾಗಿದೆ.ಮತ್ತೆ ನಾಲ್ಕು ಪ್ರಕರಣಗಳು ದಾಖಲಾಗುವ ಮೂಲಕ ಒಮಿಕ್ರಾನ್‌ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸ್ಪಷ್ಟಪಡಿಸಿದ್ದಾರೆ.

ಒಮಿಕ್ರಾನ್‌ ಸೋಂಕಿತ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಮೊದಲ ಒಮಿಕ್ರಾನ್‌ ಸೋಂಕಿತ ಚಿಕಿತ್ಸೆ ಬಳಿಕ ಲೋಕ್‌ ನಾಯಕ್‌ ಜೈಪ್ರಕಾಶ್‌ ನಾರಾಯಣ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಂಚಿಯ ನಿವಾಸಿಯಾಗಿರುವ ಈ ವ್ಯಕ್ತಿ ಡಿಸೆಂಬರ್ 2 ರಂದು ತಾಂಜೆನಿಯಾದಿಂದ ದೋಹಾಗೆ ಮತ್ತು ಅಲ್ಲಿಂದ ದೆಹಲಿಗೆ ಕತಾರ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಒಂದು ವಾರ ತಂಗಿದ್ದರು. ಇವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು.

ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣದ ಇತಿಹಾಸ ಹೊಂದಿರುವ 35 ವರ್ಷದ ವ್ಯಕ್ತಿಗೂ ಕೂಡ ಒಮಿಕ್ರಾನ್‌ ಪಾಸಿಟಿವ್‌ ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ವೈರಸ್‌ನ ಪ್ರಕರಣಗಳ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಎಲ್ಎನ್‌ಜೆಪಿ ಆಸ್ಪತ್ರೆಯನ್ನು ಕೋವಿಡ್‌-19ನ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಗೊತ್ತುಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: COVID Update: ಉಗಾಂಡದಿಂದ ಬಂದ ಮೂವರಿಗೆ ಕೋವಿಡ್​.. ಜಿನೋಮ್ ಸೀಕ್ವೆನ್ಸಿಂಗ್​ಗೆ ಮಾದರಿ ರವಾನೆ

Last Updated : Dec 14, 2021, 4:50 PM IST

ABOUT THE AUTHOR

...view details