ಕರ್ನಾಟಕ

karnataka

ETV Bharat / bharat

ಪೆರೋಲ್ ಮೇಲೆ ಬಿಡುಗೆಯಾದ 3,400 ಕೈದಿಗಳು ನಾಪತ್ತೆ : ಕೋವಿಡ್ ಮಧ್ಯೆ ದೆಹಲಿ ಸರ್ಕಾರಕ್ಕೆ ಮತ್ತೊಂದು ಸವಾಲು - Prisoners released during locked down

ಕೋವಿಡ್ ನಿರ್ವಹಣೆಯ ಸವಾಲಿನ ನಡುವೆ ದೆಹಲಿ ಸರ್ಕಾರ, ಪೊಲೀಸ್ ಮತ್ತು ತಿಹಾರ್ ಜೈಲು ಅಧಿಕಾರಿಗಳಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಲಾಕ್​ ಡೌನ್ ವೇಳೆ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾದ ಶೇ.50 ರಷ್ಟು ಕೈದಿಗಳು ತಪ್ಪಿಸಿಕೊಂಡಿದ್ದಾರೆ.

Prisoners escaped fromTihar Jail
ತಿಹಾರ್ ಜೈಲಿನಿಂದ ತಪ್ಪಿಸಿಕೊಂಡ ಕೈದಿಗ

By

Published : Apr 17, 2021, 9:23 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗ್ತಿವೆ. ಈ ನಡುವೆ ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರುವಾಗಿದ್ದು, ಕಳೆದ ವರ್ಷ ಲಾಕ್​ಡೌನ್ ಅವಧಿಯಲ್ಲಿ ಪೆರೋಲ್ ಮೇಲೆ ತಿಹಾರ್​ ಜೈಲಿನಿಂದ ಬಿಡುಗಡೆಯಾದ 6,500 ಕೈದಿಗಳ ಪೈಕಿ 3,400 ಜನ ಹಿಂದಿರುಗಿಲ್ಲ.

ವರದಿಗಳ ಪ್ರಕಾರ, ಈ ಕೈದಿಗಳಲ್ಲಿ ಹಲವರು ಗಂಭೀರ ಅಪರಾಧಗಳ ಪ್ರಕರಣಗಳು ಎದುರಿಸುತ್ತಿರುವವರಾಗಿದ್ದಾರೆ. ಇದು ದೆಹಲಿ ಪೊಲೀಸ್ ಮತ್ತು ತಿಹಾರ್ ಜೈಲು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದ್ದು, ತಪ್ಪಿಸಿಕೊಂಡ ಕೈದಿಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುವ ಸಾಧ್ಯತೆಯಿದೆ.

ತಿಹಾರ್ ಜೈಲಿನ ಮಾಜಿ ಕಾನೂನು ಅಧಿಕಾರಿ ಸುನಿಲ್ ಗುಪ್ತಾ ಮಾತನಾಡಿ, 2020 ರಲ್ಲಿ ಜೈಲಿನೊಳಗೆ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳಲು ಪ್ರಾರಂಭವಾದಾಗ ಜೈಲಿನಲ್ಲಿದ್ದ ಕೈದಿಗಳ ಸಂಖ್ಯೆ ಜೈಲಿನ ಸಾಮರ್ಥ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿತ್ತು.

ಇಂತಹ ಪರಿಸ್ಥಿತಿಯಲ್ಲಿ, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸುಮಾರು 6,500 ಕೈದಿಗಳನ್ನು ಹಂತ ಹಂತವಾಗಿ ತಿಹಾರ್ ಜೈಲಿನಿಂದ ಪೆರೋಲ್ ಮತ್ತು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಪೈಕಿ 1,184 ಶಿಕ್ಷೆಗೊಳಗಾದ ಕೈದಿಗಳನ್ನು ದೆಹಲಿ ಸರ್ಕಾರವು ತುರ್ತು ಪೆರೋಲ್ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಿದೆ.

ಅದೇ ಸಮಯದಲ್ಲಿ, ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯು ನಿರ್ಧರಿಸಿದ ನಿಯಮಗಳ ಆಧಾರದ ಮೇಲೆ 5,556 ಮಂದಿ ಕೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕಳೆದ ಡಿಸೆಂಬರ್ ನಂತರ, ದೆಹಲಿಯಲ್ಲಿ ಕೋವಿಡ್ -19 ಸೋಂಕಿನ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸಿದಾಗ, ಈ ಕೈದಿಗಳನ್ನು ಮತ್ತೆ ಶರಣಾಗುವಂತೆ ಕೇಳಲಾಯಿತು. ಆದರೆ, ಶೇ. 50 ಕ್ಕೂ ಹೆಚ್ಚು ಕೈದಿಗಳು ಇನ್ನೂ ಶರಣಾಗಿಲ್ಲ.

ತಪ್ಪಿಸಿಕೊಂಡ ಕೈದಿಗಳು ಎಲ್ಲಿಗೆ ಹೋದರು..?

ಎಲ್ಲಾ ಕೈದಿಗಳನ್ನು ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ ಸಣ್ಣ ಕಳ್ಳತನದಿಂದ ಹಿಡಿದು ಕೊಲೆ ಪ್ರಕರಣಗಳವರೆಗಿನ ಅಪರಾಧಿಗಳು ಇದ್ದರು. ಮೊದಲು 45 ದಿನಗಳ ಮಧ್ಯಂತರ ಜಾಮೀನಿನ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಕೊರೊನಾ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ, ಈ ಅವಧಿಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. ಆದರೆ, ಈಗ ಶರಣಾಗುವಂತೆ ಜೈಲಾಧಿಕಾರಿಗಳು ಸೂಚಿಸಿದರೂ ಹೆಚ್ಚಿನ ಸಂಖ್ಯೆಯ ಕೈದಿಗಳು ಇನ್ನೂ ಹಿಂತಿರುಗಿಲ್ಲ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ಸಿಕ್ಕಿದೆ ಎಂದು ಸುನಿಲ್ ಗುಪ್ತಾ ಹೇಳಿದ್ದಾರೆ.

ಈ ಕೈದಿಗಳ ಪೈಕಿ ಕೆಲವರು ಖುಲಾಸೆಗೊಂಡಿರಬಹುದು ಅಥವಾ ಜಾಮೀನು ಪಡೆದಿರಬಹುದು. ಇನ್ನೂ ಕೆಲವರು ಜಾಮೀನು ಅವಧಿಯನ್ನು ವಿಸ್ತರಿಸಿರಬಹುದು. ತಿಹಾರ್ ಜೈಲು ಆಡಳಿತ ಈ ಬಗ್ಗೆ ತಿಳಿಸಿಲ್ಲ. ಇದರೊಂದಿಗೆ, ಪೆರೋಲ್ ಅವಧಿಯನ್ನು ಬಳಸಿಕೊಂಡು ಅನೇಕ ಕೈದಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಗುಪ್ತಾ ತಿಳಿಸಿದ್ದಾರೆ.

ತಪ್ಪಿಸಿಕೊಂಡವರನ್ನು ಹಿಡಿಯುವುದು ಕಷ್ಟವಾದ್ದರಿಂದ ಅಪರಾಧ ಹೆಚ್ಚಬಹುದು:

ದೆಹಲಿಯ ಮಾಜಿ ಪೊಲೀಸ್ ಎಸಿಪಿ ವೇದ ಭೂಷಣ್ ಪ್ರಕಾರ, 3,400 ಕೈದಿಗಳಲ್ಲಿ ತಮ್ಮ ಬ್ಯಾರಕ್‌ಗಳಿಗೆ ಮರಳದವರು ಹೆಚ್ಚಿನ ಅಪರಾಧಗಳನ್ನು ಮಾಡಿದವರಾಗಿದ್ದಾರೆ. ಇವರು ದೆಹಲಿಯ ಬೀದಿಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುವ ಉದ್ದೇಶದಿಂದ ಜೈಲಿಗೆ ಮತ್ತೆ ಶರಣಾಗದೇ ಇರಬಹುದು ಎಂದು ಕಾಣುತ್ತದೆ. ಈ ಕೈದಿಗಳನ್ನು 2020 ರಲ್ಲಿ ಬಿಡುಗಡೆ ಮಾಡಿದಾಗ, ಆ ಸಮಯದಲ್ಲಿ ಕಳ್ಳತನ, ದರೋಡೆ, ಲೂಟಿ ಇತ್ಯಾದಿ ಘಟನೆಗಳಲ್ಲಿ ಏರಿಕೆ ಕಂಡು ಬಂದಿದೆ. ಈಗ ಅವರು ಜೈಲಿಗೆ ಮರಳದ ಕಾರಣ ಬೀದಿಗಳಲ್ಲಿ ಅಪರಾಧಗಳು ಮತ್ತೊಮ್ಮೆ ಹೆಚ್ಚಾಗುತ್ತವೆ ಎಂದು ಭೂಷಣ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ, ಅವರನ್ನು ಹಿಡಿಯುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ರಾಜಧಾನಿಯಲ್ಲಿ ಕೋವಿಡ್ ಸೋಂಕು ಮತ್ತೊಮ್ಮೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ 300 ಕ್ಕೂ ಹೆಚ್ಚು ಪೊಲೀಸರು ಕೋವಿಡ್​ಗೆ ತುತ್ತಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಣೆಯಾದ 3000 ಮಂದಿ ಕೈದಿಗಳನ್ನು ಕಂಡು ಹಿಡಿಯುವುದು ದೊಡ್ಡ ಸವಾಲಿನ ಕೆಲಸ ಎಂದು ತಿಳಿಸಿದ್ದಾರೆ.

ABOUT THE AUTHOR

...view details