ಕರ್ನಾಟಕ

karnataka

ETV Bharat / bharat

ಉಪಹಾರ್​ ಸಿನಿಮಾ ದುರಂತ ಕೇಸ್​: ಐವರಿಗೆ 7 ವರ್ಷ ಜೈಲು ಶಿಕ್ಷೆ - ಐವರಿಗೆ 7 ವರ್ಷ ಜೈಲು ಶಿಕ್ಷೆ

ಈ ಪ್ರಕರಣದಲ್ಲಿ ನ್ಯಾಯಾಲಯದ ಉದ್ಯೋಗಿ ದಿನೇಶ್ ಚಂದ್ ಶರ್ಮಾ ಅವರಿಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಸುಶೀಲ್ ಅನ್ಸಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

delhi court
ಐವರಿಗೆ 7 ವರ್ಷ ಜೈಲು ಶಿಕ್ಷೆ

By

Published : Nov 8, 2021, 8:11 PM IST

ನವದೆಹಲಿ:'ಉಪಹಾರ್​ ಸಿನಿಮಾ ದುರಂತ' ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಸುಶೀಲ್​ ಅನ್ಸಾಲ್​ ಮತ್ತು ಗೋಪಾಲ್​ ಅನ್ಸಾಲ್​ ಸೇರಿದಂತೆ ಐವರು ಆರೋಪಿಗಳಿಗೆ ದೆಹಲಿಯ ಪಟಿಯಾಲಾ ಹೌಸ್​ ಕೋರ್ಟ್​ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಅಲ್ಲದೇ, ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ತಲಾ 2.25 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಈ ಆದೇಶ ನೀಡಿದ್ದಾರೆ. ಪ್ರಕರಣದ ಸಾಕ್ಷಿಗಳನ್ನು ತಿರುಚಿದ್ದಕ್ಕಾಗಿ ನ್ಯಾಯಾಲಯ ಐವರನ್ನು ದೋಷಿ ಎಂದು ಈ ಹಿಂದೆ ತೀರ್ಪು ನೀಡಿತ್ತು.

ಈ ಪ್ರಕರಣದಲ್ಲಿ ನ್ಯಾಯಾಲಯದ ಉದ್ಯೋಗಿ ದಿನೇಶ್ ಚಂದ್ ಶರ್ಮಾ ಅವರಿಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಸುಶೀಲ್ ಅನ್ಸಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಜೂನ್ 13, 1997 ರಂದು ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್‌ನಲ್ಲಿರುವ ಉಪಹಾರ್ ಚಿತ್ರಮಂದಿರದಲ್ಲಿ 'ಬಾರ್ಡರ್' ಚಲನಚಿತ್ರದ ಪ್ರದರ್ಶನದ ವೇಳೆ ಬೆಂಕಿ ಕಾಣಿಸಿಕೊಂಡು 59 ಜನರು ಉಸಿರುಗಟ್ಟಿ ಸಾವನ್ನಪ್ಪಿದರು. ನಂತರ ನಡೆದ ಕಾಲ್ತುಳಿತದಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡರು.

ಉಪಹಾರ್ ದುರಂತ ಸಂತ್ರಸ್ತರ ಸಂಘದ(ಎವಿಯುಟಿ) ಅಧ್ಯಕ್ಷ ನೀಲಂ ಕೃಷ್ಣಮೂರ್ತಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ABOUT THE AUTHOR

...view details