ನವದೆಹಲಿ:ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಹೆಚ್ಚುವರಿ ಸೆಷನ್ ಜಡ್ಜ್ ಧರ್ಮೇಂದರ್ ರಾಣಾ ಜಾಮೀನು ನೀಡಿ, ಆದೇಶ ಹೊರಡಿಸಿದ್ದು, 1 ಲಕ್ಷ ರೂಪಾಯಿಯ ಎರಡು ಪ್ರತ್ಯೇಕ ಬಾಂಡ್ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಇದೇ ವೇಳೆ, ಯಾವುದೇ ಅಪರಾಧ ಹಿನ್ನೆಲೆ ಇಲ್ಲದ 22 ವರ್ಷ ಈ ಯುವತಿಗೆ ಜಾಮೀನು ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಪ್ರಧಾನಿಗೆ ಬರೆದ ಪತ್ರದಲ್ಲಿ ಕರ್ನಾಟಕದ ವಿರುದ್ಧ ಹರಿಹಾಯ್ದ ಕೇರಳ ಸಿಎಂ
ಸೋಮವಾರವಷ್ಟೇ ದಿಶಾ ರವಿ ಅವರ ಮೂರು ದಿನಗಳ ನ್ಯಾಯಾಂಗ ಬಂಧನ ಕೊನೆಯಾಗಲಿದ್ದ ಕಾರಣದಿಂದ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಪಟಿಯಾಲಾ ಹೌಸ್ ಕೋರ್ಟ್ ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು.
ಹಿಂದಿನ ವಾರ ದಿಶಾ ರವಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ಆ ತೀರ್ಪನ್ನು ತಡೆಹಿಡಿಯಲಾಗಿತ್ತು. ಈಗ ಪಟಿಯಾಲಾ ಹೌಸ್ ಕೋರ್ಟ್ ಆದೇಶ ನೀಡಿದ್ದು, ದಿಶಾ ರವಿಗೆ ಜಾಮೀನು ದೊರೆತಿದೆ.
ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದಿಶಾ ರವಿ ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಮತ್ತು ನಿಕಿತಾ ಜಾಕೋಬ್, ಶಂತನು ಮುಲುಕ್ ಮೇಲೆ ಖಲಿಸ್ತಾನಿ ಪರ ಸಂಘಟನೆಯಾದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ನೊಂದಿಗೆ ಸಂಪರ್ಕವಿರುವ ಆರೋಪವೂ ಇತ್ತು.