ನವದೆಹಲಿ:ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೆಹಲಿ ಮತ್ತು ಗುರುಗಾಂವ್ನಲ್ಲಿರುವ ಟ್ವಿಟರ್ ಕಚೇರಿಗೆ ತೆರಳಿದ್ದಾಗಿ ತಿಳಿದು ಬಂದಿದೆ. ನೋಟಿಸ್ ನೀಡುವ ಉದ್ದೇಶದಿಂದ ತಾವು ಹೋಗಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಟೂಲ್ಕಿಟ್ ವಿವಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಟ್ಟಿಟರ್ ಎಂಡಿಗೆ ನೋಟಿಸ್ ನೀಡಲು ಪೊಲೀಸರು ಭೇಟಿ ನೀಡಿದ್ದಾರೆ.
ಟ್ವಿಟರ್ ಕಚೇರಿಗೆ ಪೊಲೀಸರು ಭೇಟಿ ಇದನ್ನೂ ಓದಿ: ಟೂಲ್ಕಿಟ್ ಪ್ರಕರಣ; ಮಾಜಿ ಸಿಎಂ ರಮಣ ಸಿಂಗ್ ಹೇಳಿಕೆ ದಾಖಲಿಸಿದ ಪೊಲೀಸರು
ಇದಕ್ಕೂ ಒಂದು ದಿನ ಮುಂಚಿತವಾಗಿ ಟ್ಟಿಟರ್ಗೆ ನೋಟಿಸ್ ಜಾರಿ ಮಾಡಿದ್ದ ದೆಹಲಿ ಪೊಲೀಸರು ಸಂಬಿತ್ ಪಾತ್ರಾ ಮಾಡಿದ್ದ ಟ್ವೀಟ್ ಅನ್ನು ಯಾವ ಆಧಾರದ ಮೇಲೆ ಟ್ಯಾಗ್ ಮಾಡಲಾಗಿತ್ತು ಎಂದು ವಿವರಣೆ ಕೋರಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸ್ಪಷ್ಟವಾದ ಉತ್ತರ ಸಿಗದ ಕಾರಣ ಭೇಟಿ ನೀಡಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾಡಿದ್ದ ಟೂಲ್ಕಿಟ್ ಆರೋಪವನ್ನ ಟ್ಟಿಟರ್ ನಿರಾಕರಿಸಿತ್ತು.ಇದೊಂದು ತಿರುಚಿದ ದಾಖಲೆ ಎಂದು ಹೇಳಿಕೊಂಡಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಮ್ಯಾನಿಫುಲೇಟೆಡ್ ಟ್ಯಾಗ್ ತೆಗೆದುಹಾಕುವಂತೆ ಸೂಚನೆ ನೀಡಿತ್ತು. ಆದರೆ ಈ ಟ್ಯಾಗ್ನ್ನ ಟ್ವಿಟರ್ ತೆಗೆದುಹಾಕಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ.