ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ 24 ಗಂಟೆಯಲ್ಲಿ 13,500 ಕೋವಿಡ್​ ಕೇಸ್​.. ಸಿಬಿಎಸ್​​ಇ ಪರೀಕ್ಷೆ ರದ್ಧತಿಗೆ ಕೇಜ್ರಿ ಆಗ್ರಹ!

ದೆಹಲಿಯಲ್ಲಿ ಕೋವಿಡ್​ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸಿಬಿಎಸ್​ಇ ಪರೀಕ್ಷೆ ರದ್ಧು ಮಾಡುವಂತೆ ಕೇಜ್ರಿವಾಲ್​ ಆಗ್ರಹಿಸಿದ್ದಾರೆ.

Kejriwal
Kejriwal

By

Published : Apr 13, 2021, 2:52 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೋವಿಡ್​ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 13,500 ಸೋಂಕಿತ ಪ್ರಕರಣ ದಾಖಲಾಗಿವೆ. ಹೀಗಾಗಿ ಸಿಬಿಎಸ್​ಇ ಪರೀಕ್ಷೆ ರದ್ಧುಗೊಳಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಜ್ರಿವಾಲ್​, ಮಕ್ಕಳ ಆರೋಗ್ಯ ನಮಗೆ ತುಂಬಾ ಅಗತ್ಯವಾಗಿದ್ದು, ತಕ್ಷಣವೇ ಸಿಬಿಎಸ್​ಇ ಪರೀಕ್ಷೆ ರದ್ಧುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಆರು ಲಕ್ಷ ಮಕ್ಕಳು ಸಿಬಿಎಸ್​​ಇ ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದು, 1 ಲಕ್ಷಕ್ಕೂ ಅಧಿಕ ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಇದು ಕೊರೊನಾಗೆ ಆಹ್ವಾನ ನೀಡುವಂತಾಗುವುದರಿಂದ ಪರೀಕ್ಷೆ ರದ್ಧುಗೊಳಿಸಬೇಕೆಂದು ಕೇಂದ್ರದ ಬಳಿ ಮನವಿ ಮಾಡಿದ್ದಾರೆ.

ಮಕ್ಕಳಿಗೆ ಬೇರೆ ರೀತಿಯಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಮೂಲಕ ಮುಂದಿನ ಹಂತಕ್ಕೆ ತೇರ್ಗಡೆ ಮಾಡುವಂತೆ ಅವರು ಮನವಿ ಮಾಡಿದ್ದು, ಅನೇಕ ರಾಷ್ಟ್ರಗಳು ಇದನ್ನ ಮಾಡಿವೆ. ಮಕ್ಕಳನ್ನ ಆನ್​ಲೈನ್​ ಅಥವಾ ಆಂತರಿಕ ಮೌಲ್ಯಮಾಪನದ ಮೂಲಕ ಮುಂದಿನ ಹಂತಕ್ಕೆ ತೇರ್ಗಡೆಗೊಳಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಪರೀಕ್ಷಾ ಮಂಡಳಿ ಈಗಾಗಲೇ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ದಿನಾಂಕ ಘೋಷಣೆ ಮಾಡಿದ್ದು, ಮೇ 4ರಿಂದ ಪರೀಕ್ಷೆ ಆರಂಭಗೊಳ್ಳಲಿವೆ. ನವದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಈಗಾಗಲೇ ನೈಟ್​ ಕರ್ಫ್ಯೂ ವಿಧಿಸಲಾಗಿದೆ. ಸದ್ಯ ದೆಹಲಿಯಲ್ಲಿ 7,36,788 ಕೋವಿಡ್ ಕೇಸ್​ಗಳಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲೇ 1.61 ಲಕ್ಷ ಸೋಂಕಿತ ಪ್ರಕರಣ ದಾಖಲಾಗಿವೆ.

ABOUT THE AUTHOR

...view details