ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ವೀಕೆಂಡ್​ ಕರ್ಫ್ಯೂ ಜಾರಿಗೊಳಿಸಿದ ಸಿಎಂ ಕೇಜ್ರಿವಾಲ್ - ಕರ್ಫ್ಯೂ ಜಾರಿ 2021

ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ವೀಕೆಂಡ್​ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ದೆಹಲಿಯ ಜನತೆ ಇವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Delhi CM Arvind Kejriwal announces weekend curfew
ಸಿಎಂ ಅರವಿಂದ್​ ಕೇಜ್ರಿವಾಲ್

By

Published : Apr 15, 2021, 2:16 PM IST

Updated : Apr 15, 2021, 2:54 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಇಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ವೀಕೆಂಡ್ ಕರ್ಫ್ಯೂ ಮೊರೆ ಹೋಗಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಈ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಅಲ್ಲದೇ ವಾರದ ಕೊನೆಯಲ್ಲಿ​ ಮಾರುಕಟ್ಟೆ, ಮಾಲ್​, ಜಿಮ್​, ರೆಸ್ಟೋರೆಂಟ್​ಗಳನ್ನು ಬಂದ್​ ಮಾಡುವಂತೆ ಸಿಎಂ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ.

ಇನ್ನು ಸಭೆ-ಸಮಾರಂಭಕ್ಕೆ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದಿರುವ ಕೇಜ್ರಿವಾಲ್​, ಥಿಯೇಟರ್​ಗಳಲ್ಲಿ ಶೇ. 30 ರಷ್ಟಕ್ಕೆ ಮಾತ್ರ ಅವಕಾಶ ನೀಡಿದ್ದಾರೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು ಮಾಲ್​, ಸ್ಪಾ, ಹೋಟೆಲ್​ ಬಂದ್​ ಮಾಡುವಂತೆ ಆದೇಶ ನೀಡಿದ್ದಾರೆ.

ದೆಹಲಿ ನಗರದಲ್ಲಿ ಇತ್ತೀಚಿನ ಮಾಹಿತಿಯ ಪ್ರಕಾರ 5,000 ಬೆಡ್​ಗಳು ಲಭ್ಯವಿದೆ, ಜೊತೆಗೆ ಹೋಟೆಲ್ ಮತ್ತು ಬ್ಯಾಂಖೆಟ್ ಹಾಲ್​ಗಳನ್ನು ಕೋವಿಡ್ ಚಿಕಿತ್ಸೆಗಾಗಿ ಬಳಸುವ ಪ್ರಯತ್ನ ಸಾಗಿದೆ ಎಂದು ಮಾಹಿತಿ ನೀಡಿರುವ ಸಿಎಂ ಕೇಜ್ರಿವಾಲ್, ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದೆ. ಸಾರ್ವಜನಿಕರು ಸಹ ಇದೇ ಆಸ್ಪತ್ರೆ ಬೇಕೆಂದು ಹಠ ಮಾಡಬಾರದು. ಅದು ನಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದರು.

Last Updated : Apr 15, 2021, 2:54 PM IST

ABOUT THE AUTHOR

...view details