ನವದೆಹಲಿ:ದೆಹಲಿಯ ಎಲ್ಲ ಅಧಿಕೃತ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ದೆಹಲಿ ಸರ್ಕಾರವು ತಲಾ 5000 ರೂ.ಗಳನ್ನು ನೀಡಲಿದೆ. ಈ ಮೂಲಕ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಇದೇ ವೇಳೆ ದೆಹಲಿಯಲ್ಲಿರುವ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳವರೆಗೆ ಉಚಿತ ರೇಷನ್ ಘೋಷಿಸಿದ್ದಾರೆ.
ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ 5,000 ರೂ., ಪಡಿತರ ಚೀಟಿದಾರರಿಗೆ ಉಚಿತ ರೇಷನ್: ದೆಹಲಿ ಸಿಎಂ - coronavirus in india
ದೆಹಲಿಯಲ್ಲಿ ಕೊರೊನಾ ತಡೆಗೆ ಲಾಕ್ಡೌನ್ ವಿಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬಾರದೆಂಬ ಉದ್ದೇಶದಿಂದ ದೆಹಲಿ ಸರ್ಕಾರವು ಅಧಿಕೃತ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರೂ.ಗಳನ್ನು ನೀಡಲಿದೆ. ಜೊತೆಗೆ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳವರೆಗೆ ಉಚಿತ ರೇಷನ್ ಘೋಷಿಸಿದೆ.
![ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ 5,000 ರೂ., ಪಡಿತರ ಚೀಟಿದಾರರಿಗೆ ಉಚಿತ ರೇಷನ್: ದೆಹಲಿ ಸಿಎಂ Delhi CM Arvind Kejriwal announces free ration for card holders](https://etvbharatimages.akamaized.net/etvbharat/prod-images/768-512-11635427-thumbnail-3x2-kejriwal.jpg)
ಪಡಿತರ ಚೀಟಿದಾರರಿಗೆ ಉಚಿತ ರೇಷನ್
1,56,000 ಕ್ಕೂ ಹೆಚ್ಚು ಆಟೋರಿಕ್ಷಾ ಚಾಲಕರು ಈ ಯೋಜನೆಯಿಂದ ಲಾಭ ಪಡೆಯುವ ನಿರೀಕ್ಷೆಯಿದೆ. ಮುಕ್ತ-ಪಡಿತರ ಯೋಜನೆಯ ಮೂಲಕ ದೆಹಲಿಯಲ್ಲಿರುವ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳವರೆಗೆ ಉಚಿತ ಪಡಿತರ ನೀಡುತ್ತೇವೆ. ರಾಷ್ಟ್ರ ರಾಜಧಾನಿಯಲ್ಲಿ 72 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ನೆರವಾಗಲಿದೆ ಎಂದು ಕೇಜ್ರಿವಾಲ್ ವಿವರಿಸಿದರು.
ಈ ನಿರ್ಧಾರದ ಅರ್ಥ ರಾಷ್ಟ್ರ ರಾಜಧಾನಿಯಲ್ಲಿ ವಿಧಿಸಲಾದ ನಿರ್ಬಂಧಗಳು ಎರಡು ತಿಂಗಳವರೆಗೆ ಇರುತ್ತವೆ ಎಂಬುದಲ್ಲ. ದೆಹಲಿಯ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಲಾಕ್ಡೌನ್ ಅಗತ್ಯವಿಲ್ಲ ಎಂದು ಇದೇ ವೇಳೆ ಅವರು ಹೇಳಿದ್ದಾರೆ.