ಕರ್ನಾಟಕ

karnataka

ETV Bharat / bharat

ಮಕ್ಕಳಲ್ಲಿ ದೇಶಭಕ್ತಿ ಮೂಡಿಸಲು ನೂತನ ಯೋಜನೆ ಘೋಷಿಸಿದ ದೆಹಲಿ ಸಿಎಂ!

ಕಳೆದ 70 ವರ್ಷಗಳಿಂದ ನಾವು ಮಕ್ಕಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಕಲಿಸುತ್ತಿದ್ದೇವೆ. ಆದರೆ, ದೇಶಭಕ್ತಿ ಕಲಿಸುವ ಬಗ್ಗೆ ಯಾರೂ ಯೋಚಿಸಲಿಲ್ಲ. ನಾವು ಈ ಭಿನ್ನ ಯೋಜನೆ ಆರಂಭಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಈ ಪಠ್ಯಕ್ರಮವನ್ನು ಸೆಪ್ಟೆಂಬರ್ 27, 2021ರಿಂದ ಜಾರಿಗೆ ತರಲಾಗುತ್ತಿದೆ..

Delhi CM Arvind Kejriwal
ಸಿಎಂ ಅರವಿಂದ್ ಕೇಜ್ರಿವಾಲ್​

By

Published : Aug 15, 2021, 5:15 PM IST

ನವದೆಹಲಿ :ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ದೆಹಲಿ ಸರ್ಕಾರ ವಿಭಿನ್ನ ಯೋಜನೆಯೊಂದಕ್ಕೆ ಕೈ ಹಾಕಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೂತನ ಪಠ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಪಠ್ಯವನ್ನು ಮುದ್ರಿಸಲಾಗಿದೆ. ಇಂದು ಸಿಎಂ ಅರವಿಂದ್ ಕೇಜ್ರಿವಾಲ್​ ಮುಂದೆ ಡಿಸಿಎಂ ಮನೀಶ್ ಸಿಸೋಡಿಯಾ ಆ ಪಠ್ಯ ಪುಸ್ತಕವನ್ನು ಪ್ರಸ್ತುತ ಪಡಿಸಿದ್ದಾರೆ.

ಈ ನೂತನ ಯೋಜನೆ ಕುರಿತು ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್​, ನಾವು ಎರಡು ವರ್ಷಗಳ ಹಿಂದೆ ಈ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಕೆಲಸ ಆರಂಭಿಸಿದೆವು. ಈ ಕ್ರಮವು ಕ್ರಿಯಾತ್ಮಕ ಮತ್ತು ನಿರಂತರವಾಗಿ ವಿಕಸನಗೊಳ್ಳುವ ಪ್ರಕ್ರಿಯೆಯಾಗಿದೆ. ಮಕ್ಕಳ ಮನಸ್ಸಲ್ಲಿ ದೇಶಭಕ್ತಿಯ ಭಾವನೆಗಳನ್ನು ತುಂಬಲು ಹೊಸ ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ ಎಂದರು.

ಕಳೆದ 70 ವರ್ಷಗಳಿಂದ ನಾವು ಮಕ್ಕಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಕಲಿಸುತ್ತಿದ್ದೇವೆ. ಆದರೆ, ದೇಶಭಕ್ತಿ ಕಲಿಸುವ ಬಗ್ಗೆ ಯಾರೂ ಯೋಚಿಸಲಿಲ್ಲ. ನಾವು ಈ ಭಿನ್ನ ಯೋಜನೆ ಆರಂಭಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಈ ಪಠ್ಯಕ್ರಮವನ್ನು ಸೆಪ್ಟೆಂಬರ್ 27, 2021ರಿಂದ ಜಾರಿಗೆ ತರಲಾಗುತ್ತಿದೆ.

ಈ ಯೋಜನೆಯನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್​ಸಿಂಗ್​ಗೆ ಸಮರ್ಪಿಸಲಾಗುವುದು ಎಂದರು. ಇದರ ಜತೆಗೆ ಅಕ್ಟೋಬರ್​ 2, 2021ರಿಂದ ದೆಹಲಿ ಸಭಾಂಗಣ ಮತ್ತು ಉದ್ಯಾನಗಳಲ್ಲಿ ಯೋಗ ತರಗತಿಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಮಹದಾಯಿ ನದಿ ನೀರಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.. ಗೋವಾ ಸಿಎಂ ಪ್ರಮೋದ್​ ಸಾವಂತ್​

ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆಯ ಜತೆಗೆ ಮಕ್ಕಳಿಗೆ ದೇಶಭಕ್ತಿ ಮೂಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದರು.

ABOUT THE AUTHOR

...view details