ಕರ್ನಾಟಕ

karnataka

ETV Bharat / bharat

ವಿಪಸ್ಸನ ಧ್ಯಾನದ ಮೊರೆ ಹೋದ ಸಿಎಂ ಅರವಿಂದ್ ಕೇಜ್ರಿವಾಲ್.. ಮುಂದಿನ ಒಂದು ವಾರ ನಾಟ್​ ರಿಚೇಬಲ್​ - ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

ಇಂದಿನಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಒಂದು ವಾರ ವಿಪಸ್ಸನ ಧ್ಯಾನ- ಇವರ ಅನುಪಸ್ಥಿಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಕಾರ್ಯ ನಿರ್ವಹಣೆ- ಮುಖ್ಯಮಂತ್ರಿ ಧ್ಯಾನಕ್ಕೆ ತೆರಳುತ್ತಿರುವ ಸ್ಥಳದ ಹೆಸರು ನಿಗೂಢ

Chief Minister Arvind Kejriwal has undertaken Vipassan meditation for 1 week
ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ 1 ವಾರ ವಿಪಸ್ಸನ ಧ್ಯಾನ ಕೈಗೊಂಡಿದ್ದಾರೆd Kejriwal has undertaken Vipassan meditation for 1 week

By

Published : Dec 24, 2022, 4:46 PM IST

ನವದೆಹಲಿ: ಚುನಾವಣಾ ಒತ್ತಡದಿಂದ ಹೊರಬಂದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದಿನಿಂದ ಒಂದು ವಾರ ಅಂದರೆ ಶನಿವಾರ ವಿಪಸ್ಸನ ಧ್ಯಾನಕ್ಕೆ ತೆರಳಿದ್ದು, ಜನವರಿ 1 ರಂದು ದೆಹಲಿಗೆ ಮರಳಲಿದ್ದಾರಂತೆ.

ಪ್ರತಿ ಬಾರಿಯೂ ಅರವಿಂದ್ ಕೇಜ್ರಿವಾಲ್ ವಿಪಸ್ಸನ ಧ್ಯಾನಕ್ಕಾಗಿ ಹಿಮಾಚಲ, ಜೈಪುರ, ಬೆಂಗಳೂರು ಮತ್ತು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು. ಆದರ ಈ ಬಾರಿ ಯಾವ ರಾಜ್ಯಕ್ಕೆ ಹೋಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗೆ ಮುಖ್ಯವಾಗಿ ವಿಪಸ್ಸನ ಧ್ಯಾನದ ನಿಯಮಗಳ ಪ್ರಕಾರ, ಮುಖ್ಯಮಂತ್ರಿ ಕೇಜ್ರಿವಾಲ್ ಇಂದಿನಿಂದ ಮುಂದಿನ ಏಳು ದಿನಗಳವರೆಗೆ ಯಾರೊಂದಿಗೂ ಸಂಪರ್ಕದಲ್ಲಿರುವುದಿಲ್ಲ. ಜೊತೆಗೆ ಅವರ ಈ ಅನುಪಸ್ಥಿಯಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕರ್ತವ್ಯ ನಿಭಾಯಿಸಲಿದ್ದಾರೆ.

ಅರವಿಂದ್ ಕೇಜ್ರಿವಾಲ್​ ಅವರು ಕೈಗೊಳ್ಳುವ ವಿಪಸ್ಸನ ಧ್ಯಾನ ಸುಮಾರು ಏಳು ದಿನಗಳ ಕಾಲ ನಿರಂತರವಾಗಿ ಕುಳಿತು ಧ್ಯಾನ ಮಾಡಬೇಕು. ಅಲ್ಲದೆ ಈ ಸಮಯದಲ್ಲಿ ಮೌನವಾಗಿರುವುದರ ಜೊತೆಗೆ ಹೆಚ್ಚು ಮಾತನಾಡದೆ, ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದದೇ ಕಠಿಣ ನಿಯಮಗಳನ್ನು ಅನುಸರಿಸಬೇಕು.

ಕೇಜ್ರಿವಾಲ್ ಟ್ವೀಟ್: ಇಂದು ನಾನು ವಿಪಸ್ಸನ ಧ್ಯಾನಕ್ಕೆ ಹೋಗುತ್ತಿದ್ದೇನೆ. ನಾನು ವರ್ಷಕ್ಕೊಮ್ಮೆ ಹೋಗಲು ಪ್ರಯತ್ನಿಸುತ್ತೇನೆ. ಅಲ್ಲದೆ ಜನವರಿ 1 ರಂದು ದೆಹಲಿಗೆ ಹಿಂತಿರುಗುತ್ತೇನೆ. ನೂರಾರು ವರ್ಷಗಳ ಹಿಂದೆ ಭಗವಾನ್ ಬುದ್ಧನು ಈ ಜ್ಞಾನವನ್ನು ಬೋಧಿಸಿದನು. ನೀವು ವಿಪಸ್ಸನ ಮಾಡಿದ್ದೀರಾ? ಇಲ್ಲದಿದ್ದರೆ, ಒಮ್ಮೆ ಮಾಡಿ. ಇದರಿಂದ ಅನೇಕ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳಿವೆ. ಎಲ್ಲರಿಗೂ ಶುಭವಾಗಲಿ! ಎಂದು ತೆರಳುವ ಮುನ್ನ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ರೀತಿಯಾಗಿ ಟ್ವೀಟ್​ ಮಾಡಿದ್ದಾರೆ.

ವಿಪಸ್ಸನಾ ಎಂದರೇನು?: ಮುಂಜಾನೆಯಿಂದ ತಡರಾತ್ರಿಯವರೆಗೂ ಕಾರ್ಯನಿರತರಾಗಿ ಜನರು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಸಾಕಷ್ಟು ದೈಹಿಕ ಮತ್ತು ಮಾನಸಿಕ ಆಯಾಸವನ್ನು ಎದುರಿಸಬೇಕಾಗುತ್ತದೆ. ಇದರಿಂದ ಒಮ್ಮೆ ಹೊರಬರಲು ಜನರು ಎಲ್ಲ ಸಂಪರ್ಕವನ್ನು ಬಿಟ್ಟು ಕೆಲವು ಗಡಿಬಿಡಿಯನ್ನು ದೂರವಿಟ್ಟು ಶಾಂತಿಯುತವಾಗಿ ಕಳೆಯಲು ಈ ಧ್ಯಾನವನ್ನು ಅನುಸರಿಸುತ್ತಾರೆ. ಜೊತೆಗೆ ಈ ವಿಪಸ್ಸನ ಒತ್ತಡದಲ್ಲಿರುವ ಜನರಿಗೆ ಹೊಸ ಶಕ್ತಿಯನ್ನು ನೀಡುವ ಕೆಲಸ ಮಾಡುತ್ತದೆ.

ಇದನ್ನೂ ಓದಿ:ಭಾರತ್​ ಜೋಡೋ ಯಾತ್ರೆ: ವಾಜಪೇಯಿ ಸೇರಿ ಮಾಜಿ ಪ್ರಧಾನಿಗಳ ಸ್ಮಾರಕಗಳಿಗೆ ರಾಹುಲ್ ಗಾಂಧಿ ಭೇಟಿ

ABOUT THE AUTHOR

...view details