ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ನ 25ನೇ ಪಂದ್ಯವನ್ನು 7 ವಿಕೆಟ್ ಗಳಿಂದ ಗೆದ್ದಿದೆ.
ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ(82, 41 ಎಸೆತ)ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ತನ್ನದಾಗಿಸಿಕೊಂಡಿದೆ. ಗೆಲ್ಲಲು 155 ರನ್ ಗುರಿ ಪಡೆದ ಡೆಲ್ಲಿ 16.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ.
ಶಾ(82, 41 ಎಸೆತ, 11 ಬೌಂಡರಿ, 3 ಸಿಕ್ಸರ್)ಹಾಗೂ ಶಿಖರ್ ಧವನ್(46, 47 ಎಸೆತ, 4 ಬೌಂ.,1 ಸಿ.)ಮೊದಲ ವಿಕೆಟ್ ಗೆ 13.5 ಓವರ್ ಗಳಲ್ಲಿ 132 ರನ್ ಗಳಿಸಿ ಗೆಲುವಿಗೆ ಬುನಾದಿ ಹಾಕಿಕೊಟ್ಟರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ರಸೆಲ್(ಔಟಾಗದೆ 45, 27 ಎಸೆತ, 2 ಬೌಂ., 4 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು. ಶುಭಮನ್ ಗಿಲ್(43), ತ್ರಿಪಾಠಿ(19)ಎರಡಂಕೆಯ ಸ್ಕೋರ್ ಪಡೆದರು. ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್(2-32) ಹಾಗೂ ಲಲಿತ್ ಯಾದವ್(2-13)ತಲಾ ಎರಡು ವಿಕೆಟ್ ಗಳನ್ನು ಗಳಿಸಿದರು.