ನವದೆಹಲಿ:ನವೆಂಬರ್ 29ರಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭಗೊಂಡಿದ್ದು, ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ವಾದ - ವಾಗ್ವಾದ ನಡೆಯುತ್ತಿವೆ. ಇದೇ ವೇಳೆ, ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ವರ್ಮಾ ಮದ್ಯದ ಬಾಟಲಿ ಎತ್ತಿ ತೋರಿಸಿದ್ದಾರೆ.
ಏನಿದು ಘಟನೆ!?
ಚಳಿಗಾಲದ ಅಧಿವೇಶನದಲ್ಲಿ ಮದ್ಯದ ಬಾಟಲಿ ಎತ್ತಿ ತೋರಿಸಿರುವ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್ ಸರ್ಕಾರ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ಮಾಡಿರುವ ಅವರು, ಕೋವಿಡ್ ಕಾಲದಲ್ಲಿ ದೆಹಲಿಯಲ್ಲಿ 25 ಸಾವಿರಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ವೇಳೆ, ದೆಹಲಿ ಸರ್ಕಾರ ಮದ್ಯದ ಬಳಕೆ ಹೆಚ್ಚಿಗೆ ಮಾಡುವ ಉದ್ದೇಶಕ್ಕಾಗಿ ಹೊಸ ಅಬಕಾರಿ ನೀತಿ ಜಾರಿಗೆ ತರಲು ನಿರತವಾಗಿತ್ತು ಎಂದರು.