ನವದೆಹಲಿ: ವಿಧಾನಸಭಾ ಸಮಿತಿ ಸದಸ್ಯರು ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿ, ವಿಶೇಷ ಕಾರ್ಯದರ್ಶಿ (vigilance) ವೈ ವಿ ವಿ ಜೆ ರಾಜಶೇಖರ್ ಅವರ ಒಬಿಸಿ ಪ್ರಮಾಣಪತ್ರ ಪರಿಶೀಲಿಸುವ ಸಲುವಾಗಿ ಅವರ ಹುಟ್ಟೂರಿಗೆ ಭೇಟಿ ನೀಡಿದೆ. ಜೂನ್ ತಿಂಗಳಲ್ಲಿ ಅಮಾನತುಗೊಂಡ DANICS ಅಧಿಕಾರಿ ರಾಜಶೇಖರ್ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. 1994ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವ ವೇಳೆ ನಕಲಿ ಒಬಿಸಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ದೂರು ಸಲ್ಲಿಸಿದ್ದರು. ವೈ ವಿ ವಿ ಜೆ ರಾಜಶೇಖರ್ ಒಬಿಸಿ ವರ್ಗಕ್ಕೆ ಸೇರಿದವರಲ್ಲ ಎಂಬುದಾಗಿ ಆರೋಪಿಸಿದ್ದರು.
ದೆಹಲಿ ವಿಧಾನಸಭೆಯ ಒಬಿಸಿ ಕಲ್ಯಾಣ ಸಮಿತಿಯು ದೂರನ್ನು ಪರಿಗಣಿಸಿ ತಮ್ಮ ನಿಲುವನ್ನು ಮಂಡಿಸುವಂತೆ ರಾಜಶೇಖರ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಆದರೆ, ರಾಜಶೇಖರ್ ಅವರು ಸಮಿತಿ ಮುಂದೆ ಹಾಜರಾಗಿಲ್ಲ. ನಿಯಮಗಳ ಪ್ರಕಾರ ಸೇವಾ ವಿಷಯಗಳಲ್ಲಿ ನೀವು ಯಾವದೇ ಅಧಿಕಾರ ಹೊಂದಿಲ್ಲ ಎಂದು ಸಮಿತಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ್ ಅವರಿಂದ ಶೀಘ್ರ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ಹಿನ್ನೆಲೆ ಆಮ್ ಆದ್ಮಿ ಪಕ್ಷದ ಶಾಸಕ ಮದನ್ ಲಾಲ್ ನೇತೃತ್ವದಲ್ಲಿ ವಿಧಾನಸಭೆಯ ಒಬಿಸಿ ಕಲ್ಯಾಣ ಸಮಿತಿಯ ಮೂವರು ಸದಸ್ಯರು ಈ ವಾರದ ಆರಂಭದಲ್ಲಿ ವಿಶಾಖಪಟ್ಟನಂ ಮತ್ತು ಅನಕಪಲ್ಲಿಗೆ ಭೇಡಿ ಕೊಟ್ಟಿತ್ತು. ಈ ಭೇಟಿ ರಾಜಶೇಖರ್ ಅವರ ಜಾತಿ ಪ್ರಮಾಣಪತ್ರದ ಪರಿಶೀಲನೆ ಕುರಿತಾಗಿತ್ತು. ಸಮಿತಿ ಈಗಾಗಲೇ ರಾಜಶೇಖರ್ ಅವರಿಗೆ ಹಲವು ನೋಟಿಸ್ಗಳನ್ನು ಜಾರಿಗೊಳಿಸಿದೆ. ಆದರೆ, ಸಮಿತಿ ಮುಂದೆ ರಾಜಶೇಖರ್ ಅವರು ಹಾಜರಾಗಿಲ್ಲ ಎಂದು ಶಾಸಕ ಮದನ್ ಲಾಲ್ ತಿಳಿಸಿದ್ದಾರೆ. ನಂತರ ಸೇವಾ ಮತ್ತು ವಿಜಿಲೆನ್ಸ್ ಇಲಾಖೆಗಳಿಂದ ಮಾಹಿತಿ ಕೇಳಲಾಗಿದ್ದರೂ ಕೂಡ ಸಂಬಂಧಿತ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಕೂಡ ತಿಳಿಸಿದ್ದಾರೆ.