ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಶನಿವಾರವೂ ಕುಸಿತಗೊಂಡಿದೆ. ಬೆಳಗ್ಗೆ 7:50 ಕ್ಕೆ 'ವಾಯು ಗುಣಮಟ್ಟ ಸೂಚ್ಯಂಕ' (AQI) 386 ದಾಖಲಾಗಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (SAFAR) ತಿಳಿಸಿದೆ.
ಗುರುಗ್ರಾಮ ಮತ್ತು ನೋಯ್ಡಾ "ಅತ್ಯಂತ ಕಳಪೆ" ವಿಭಾಗದಲ್ಲಿ ಕ್ರಮವಾಗಿ 355 ಮತ್ತು 391 ಎಕ್ಯೂಐ ದಾಖಲಿಸಿವೆ. ಪ್ರತಿಯೊಬ್ಬರೂ ಆರೋಗ್ಯದ ಪರಿಣಾಮ ಮತ್ತು ಉಸಿರಾಟದ ಸಮಸ್ಯೆ ಎದುರಿಸಬಹುದು ಎಂದು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿ PM2.5 ನಲ್ಲಿ ಸ್ಟಬಲ್ ಬರ್ನಿಂಗ್ (274) ಸಂಬಂಧಿತ ಮಾಲಿನ್ಯಕಾರಕಗಳ ಪಾಲು ಶೇ.8 ರಷ್ಟಿದೆ. ಪದರದ ಎತ್ತರ ಮತ್ತು ಗಾಳಿಯನ್ನು ಮಿಶ್ರಣ ಮಾಡುವುದು ಗಾಳಿಯ ಗುಣಮಟ್ಟವನ್ನು ನಿಯಂತ್ರಿಸುವ ಪ್ರಮುಖ ಅಂಶಗಳಾಗಿವೆ. ಹೆಚ್ಚಿನ ಗಾಳಿಯ ವೇಗದಿಂದಾಗಿ ಎಕ್ಯೂಐ ನಲ್ಲಿ 29 ನೇ ಗಮನಾರ್ಹ ಸುಧಾರಣೆ ನಿರೀಕ್ಷಿಸಲಾಗಿದೆ, "ತೀವ್ರ" ವಿಭಾಗದಲ್ಲಿ ಎಕ್ಯೂಐ 428ಗೆ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು SAFAR ಹೇಳಿದೆ.