ನವದೆಹಲಿ: ಬಹು ನಿರೀಕ್ಷಿತ ಸಿಬಿಎಸ್‌ಇ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಅಧಿಕೃತ ವೆಬ್ಸೈಟ್ ನೋಡಬಹುದಾಗಿದೆ.
ಬಹು ನಿರೀಕ್ಷಿತ CBSE 12ನೇ ತರಗತಿ ಫಲಿತಾಂಶ ಪ್ರಕಟ - CBSE Class 12 Result 2021 Today At 2 PM
CBSE ದ್ವಿತೀಯ ಪಿಯುಸಿ ತರಗತಿ ಪರೀಕ್ಷೆ ಫಲಿತಾಂಶವೂ ಪ್ರಕಟಗೊಂಡಿದೆ.
ಸಿಬಿಎಸ್‌ಇ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಈ ಹಿಂದೆಯೇ ಪ್ರಕಟಿಸಬೇಕಿತ್ತು. ಶಾಲೆಗಳ ಜೊತೆಗೆ ಮಂಡಳಿಯು ದತ್ತಾಂಶ ಒಟ್ಟು ಸೇರಿಸಲು ತಡವಾದ ಕಾರಣ ಮುಂದೂಡಲಾಗಿತ್ತು. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿತ್ತು.
ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶ ನೀಡಲಿದ್ದೇವೆ. ಯಾವುದೇ ಕಾರಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸವಾಗಲ್ಲ. ಈ ವರ್ಷ ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗಲಿಲ್ಲ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಕೋನದಿಂದ ಯಾರಿಗೂ ತೊಂದರೆ ಆಗದಂತೆ ನ್ಯಾಯಯುತವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡುತ್ತಿದ್ದೇವೆ ಎಂದು ಸಿಬಿಎಸ್‌ಇ ಮಂಡಳಿ ಈ ಹಿಂದೆ ತಿಳಿಸಿತ್ತು.