ನವದೆಹಲಿ:ದೆಹಲಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿರುವ ಪೈಶಾಚಿಕ ಕೃತ್ಯಕ್ಕೆ 9 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದು, ಇದೀಗ ಸಂತ್ರಸ್ತೆ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ರೂಪಾಯಿ ನಗದು ಪರಿಹಾರ ಘೋಷಣೆ ಮಾಡಿದ್ದಾರೆ.
ಆಗಸ್ಟ್ 1ರ ಸಂಜೆ ಈ ಘಟನೆ ನಡೆದಿದ್ದು, ಸಂಜೆ 5.30ಕ್ಕೆ ಮನೆಯಿಂದ ಹೊರ ಬಂದಾಗ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ದೆಹಲಿಯ ಕಂಟೋನ್ಮೆಂಟ್ ಏರಿಯಾದ ನಂಗಲ್ ಗ್ರಾಮದಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕರು ತಂದನಂತರ ಕೊಲೆ ಮಾಡಿ, ಆಕೆಯ ಶವ ಸುಟ್ಟು ಹಾಕಿದ್ದರು.
ಘಟನೆ ನಡೆದ ಬಳಿಕ ಈ ಪ್ರಕರಣ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೇ ಪ್ರಕರಣವನ್ನಿಟ್ಟುಕೊಂಡು ದೆಹಲಿಯಲ್ಲಿ ವಿವಿಧ ಪಕ್ಷಗಳು ಆಮ್ ಆದ್ಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಸ್ಟ್ 4ರಂದು ಮೃತ ಬಾಲಕಿ ಪೋಷಕರ ಭೇಟಿ ಮಾಡಿದ್ದರು. ಈ ವೇಳೆ, ಆರ್ಥಿಕ ಸಹಾಯ ನೀಡುವ ಭರವಸೆ ಸಹ ನೀಡಿದ್ದರು.