ಕರ್ನಾಟಕ

karnataka

ರಾಷ್ಟ್ರದಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ಗಡಿ ದಾಟಿದ ರಕ್ಷಣಾ ಸಾಧನ ಉತ್ಪಾದನೆ ಪ್ರಮಾಣ!

By

Published : May 19, 2023, 10:08 PM IST

2021-22 ಹಣಕಾಸು ವರ್ಷವನ್ನು ಪ್ರಸ್ತುತ ವರ್ಷಕ್ಕೆ ಹೋಲಿಸಿದರೆ ಶೇಕಡಾ 12 ರಷ್ಟು ಹೆಚ್ಚು ಏರಿಕೆಯಾಗಿದೆ.

ಕೇಂದ್ರ ರಕ್ಷಣಾ ಸಚಿವಾಲಯ
ಕೇಂದ್ರ ರಕ್ಷಣಾ ಸಚಿವಾಲಯ

ನವದೆಹಲಿ :ತನ್ನಸತತ ಪ್ರಯತ್ನದ ಫಲವಾಗಿ 2022-23ರ ಹಣಕಾಸು ವರ್ಷದಲ್ಲಿ (ಎಫ್‌ವೈ) ರಕ್ಷಣಾ ಉತ್ಪಾದನೆಯ ಮೌಲ್ಯವು ಮೊದಲ ಬಾರಿಗೆ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ. ಮೌಲ್ಯವು ಪ್ರಸ್ತುತ 1,06,800 ಕೋಟಿ ರೂಪಾಯಿಗಳಷ್ಟಿದೆ. ಮತ್ತು ಉಳಿದ ಖಾಸಗಿ ರಕ್ಷಣಾ ಉದ್ಯಮಗಳಿಂದ ಡೇಟಾವನ್ನು ಸ್ವೀಕರಿಸಿದ ನಂತರ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವಾಲಯ ಪ್ರಕಾರ ಪ್ರಸ್ತುತ 2022-23ರ ರಕ್ಷಣಾ ಉತ್ಪಾದನೆಯ ಪ್ರಸ್ತುತ ಮೌಲ್ಯವು 2021-22 ಕ್ಕಿಂತ ಶೇಕಡಾ 12 ರಷ್ಟು ಹೆಚ್ಚು ಏರಿಕೆಯಾಗಿದ್ದು, ಈ ಅಂಕಿ - ಅಂಶವು 95,000 ಕೋಟಿ ರೂ. ಗಳನ್ನು ಬಹಿರಂಗ ಪಡಿಸಿದೆ. ಸರ್ಕಾರವು ರಕ್ಷಣಾ ಕೈಗಾರಿಕೆಗಳು ಮತ್ತು ಅವರ ಸಂಘ ಸಂಸ್ಥೆಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಅವರು ಎದುರಿಸುತ್ತಿರುವ ಸವಾಲುಗಳನ್ನು ತೆಗೆದುಹಾಕಲು ದೇಶದಲ್ಲಿ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ :ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸಂಕಷ್ಟ.. ಸಿಬಿಐಯಿಂದ ಸಮನ್ಸ್​​ ಜಾರಿ

ಹೀಗಾಗಿ ಕಳೆದ 7-8 ವರ್ಷಗಳಲ್ಲಿ ಕೈಗಾರಿಕೆಗಳಿಗೆ ನೀಡಿದ ರಕ್ಷಣಾ ಪರವಾನಗಿಗಳ ಸಂಖ್ಯೆಯಲ್ಲಿ ಸುಮಾರು 200 ರಷ್ಟು ಹೆಚ್ಚಳವಾಗಿದೆ. ಆ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳು ದೇಶದ ರಕ್ಷಣಾ ಕೈಗಾರಿಕಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಿದ್ದು, ಜೊತೆ ಅಪಾರ ಉದ್ಯೋಗಾವಕಾಶಗಳನ್ನು ದೇಶದಲ್ಲಿ ಸೃಷ್ಟಿಸಿವೆ. ಆರ್ಥಿಕ ವ್ಯವಹಾರವನ್ನು ಸುಲಭಗೊಳಿಸುವ ಉದ್ದೇಶವನ್ನು ಸಾಧಿಸಲು ಹಲವಾರು ನೀತಿ ಸುಧಾರಣೆಗಳನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ :ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಕೇಸ್: ತಾಯಿಯ ಅನಾರೋಗ್ಯದ ಕಾರಣ ನೀಡಿ ಸಿಬಿಐ ವಿಚಾರಣೆಗೆ ಕಡಪ ಸಂಸದ ಗೈರು

ಇದರಲ್ಲಿ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್​ಎಂಇ) ಮತ್ತು ಪೂರೈಕೆ ಸರಪಳಿಗೆ ಸ್ಟಾರ್ಟ್ - ಅಪ್‌ಗಳ ಏಕೀಕರಣವೂ ಸೇರಿದೆ. ಈ ನೀತಿಗಳಿಂದಾಗಿ ಎಂಎಸ್​ಎಂಇ ಗಳು ಮತ್ತು ಸ್ಟಾರ್ಟ್-ಅಪ್‌ಗಳು ಸೇರಿದಂತೆ ಕೈಗಾರಿಕೆಗಳು ರಕ್ಷಣಾ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಬರಲಿವೆ.

2000 ಮುಖಬೆಲೆ ನೋಟ್​ ಹಿಂಪಡೆದ ಆರ್​ಬಿಐ :ಈ ನಡುವೆಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ)ಮಹತ್ವದ ನಿರ್ಧಾರಯೊಂದನ್ನು ತೆಗೆದುಕೊಂಡಿದೆ. 2,000 ರೂ. ಮುಖಬೆಲೆಯ ನೋಟಗಳ ಹಿಂತೆಗೆದುಕೊಂಡು ವಿನಿಮಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಆರ್​ಬಿಐ ಸಲಹೆ ನೀಡಿದೆ. ಹಾಗು ಮೇ 23, 2023 ರಿಂದ ಸೆಪ್ಟೆಂಬರ್ 30, 2023 ರವರೆಗೆ 2000 ರೂ. ಮುಖಬೆಲೆಯ ನೋಟುಗಳಿಗೆ ಎಲ್ಲ ಬ್ಯಾಂಕ್​ಗಳು ತಮ್ಮ ಶಾಖೆಗಳಲ್ಲಿ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್​ಬಿಐ ​ಘೋಷಿಸಿದೆ.

ಇದನ್ನೂ ಓದಿ :2000 ರೂ. ನೋಟ್​ ಹಿಂಪಡೆದುಕೊಂಡ ಆರ್​ಬಿಐ... ನೋಟು ಇದ್ದವರು ಹೀಗೆ ಮಾಡಿ...! ಭಯಬೇಡ - ಆರ್​ಬಿಐ ಅಭಯ

ABOUT THE AUTHOR

...view details