ನವದೆಹಲಿ: ಮೇಕ್ ಇನ್ ಇಂಡಿಯಾ ಭಾಗವಾಗಿ ರಕ್ಷಣಾ ಕ್ಷೇತ್ರಕ್ಕೆ ದೈತ್ಯ ಯುದ್ಧ ಟ್ಯಾಂಕ್ 'ಅರ್ಜುನ-ಎಂಕೆ1ಎ' ಈಗಾಗಲೇ ಭಾರತೀಯ ಸೇನೆಗೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಇದೀಗ 6 ಸಾವಿರ ಕೋಟಿ ರೂ. ವೆಚ್ಚದಲ್ಲಿ 118 ಅರ್ಜುನ್ ಮಾರ್ಕ್ ಟ್ಯಾಂಕ್ ಅಭಿವೃದ್ಧಿಪಡಿಸಲು ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿದೆ.
6 ಸಾವಿರ ಕೋಟಿ ರೂ. ವೆಚ್ಚದ 118 ಅರ್ಜುನ್ ಮಾರ್ಕ್ ಟ್ಯಾಂಕ್ ಅಭಿವೃದ್ಧಿಗೆ ರಕ್ಷಣಾ ಇಲಾಖೆ ಅನುಮತಿ! - 118 ಅರ್ಜುನ್ ಮಾರ್ಕ್ ಟ್ಯಾಂಕ್ ಅಭಿವೃದ್ಧಿ
ದೈತ್ಯ ಯುದ್ಧ ಟ್ಯಾಂಕ್ ಅರ್ಜುನ ಮಾರ್ಕ್-1ಎ ಈಗಾಗಲೇ ಭಾರತೀಯ ಸೇನೆ ಸೇರ್ಪಡೆಗೊಂಡಿದ್ದು, ಇದರ ಅಭಿವೃದ್ಧಿಗಾಗಿ ಸದ್ಯ ಕೇಂದ್ರ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ.
![6 ಸಾವಿರ ಕೋಟಿ ರೂ. ವೆಚ್ಚದ 118 ಅರ್ಜುನ್ ಮಾರ್ಕ್ ಟ್ಯಾಂಕ್ ಅಭಿವೃದ್ಧಿಗೆ ರಕ್ಷಣಾ ಇಲಾಖೆ ಅನುಮತಿ! 118 Arjun Mark1A tanks](https://etvbharatimages.akamaized.net/etvbharat/prod-images/768-512-10744719-thumbnail-3x2-wdfdfdfdf.jpg)
6,000 ಕೋಟಿ ರೂ.ಗಳ ವೆಚ್ಚದಲ್ಲಿ ಭಾರತೀಯ ಸೇನೆಗಾಗಿ 118 ಅರ್ಜುನ್ ಮಾರ್ಕ್ 1 ಎ ಟ್ಯಾಂಕ್ ಸೇರಿಕೊಳ್ಳಲಿದ್ದು, ಇದಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ. ಒಪ್ಪಂದಕ್ಕೆ ಸಹಿ ಹಾಕಿದ 30 ತಿಂಗಳೊಳಗೆ 58 ಟನ್ ತೂಕದ ಡಿಆರ್ಡಿಒ ಅಭಿವೃದ್ಧಿಪಡಿಸಿದ ಟ್ಯಾಂಕ್ಗಳು ವಿತರಣೆಗೆ ಸಿದ್ಧವಾಗಲಿವೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ನಾಲ್ಕು ದಶಕಗಳ ಇತಿಹಾಸ ಈ ಅರ್ಜುನ್ ಮಾರ್ಕ್ ಟ್ಯಾಂಕ್ಗೆ ಇದೆ. ಇದರ ಜತೆಗೆ ಸ್ಥಳೀಯವಾಗಿ ಅಭಿವೃದ್ಧಿಗೊಂಡಿರುವ ನಾಗ್ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ಮತ್ತು ಅರುಧ್ರಾ ಮಧ್ಯಮ ವಿದ್ಯುತ್ ರೇಡಾರ್ ಸ್ವಾಧೀನಕ್ಕೂ ರಕ್ಷಣಾ ಇಲಾಖೆ ಅನುಮತಿ ನೀಡಿದೆ.