ನವದೆಹಲಿ: ಡ್ರೋನ್‌ಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಕಾರ್ಬೈನ್‌ಗಳು ಸೇರಿದಂತೆ ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂ.ಗಳ ಖರೀದಿ ಪ್ರಸ್ತಾವನೆಗಳಿಗೆ ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ. 28,732 ಕೋಟಿ ಮೊತ್ತದ ಸಶಸ್ತ್ರ ಪಡೆಗಳ ಬಂಡವಾಳ ಸ್ವಾದೀನ ಪ್ರಸ್ತಾವನೆಗಳಿಗೆ ಅಗತ್ಯತೆಯ ಸ್ವೀಕಾರವನ್ನು ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ನಲ್ಲಿ ನೀಡಲಾಗಿದೆ. ಇದು ಆತ್ಮನಿರ್ಭರ ಭಾರತ್ಗೆ ಮತ್ತಷ್ಟು ಉತ್ತೇಜನವನ್ನು ನೀಡಲಿದೆ.
ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಪಡೆಗಳಿಗೆ ಶತ್ರು ಸ್ನೈಪರ್‌ಗಳ ಬೆದರಿಕೆಯ ವಿರುದ್ಧ ರಕ್ಷಣೆ ಪಡೆಯಲು ಮತ್ತು ಭಯೋತ್ಪಾದನಾ ನಿಗ್ರಹ ಸನ್ನಿವೇಶಗಳಲ್ಲಿ ನಿಕಟ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಲು ಭಾರತೀಯ ಗುಣಮಟ್ಟದ BIS VI ಮಟ್ಟದ ಬುಲೆಟ್ ಪ್ರೂಫ್ ಜಾಕೆಟ್‌ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಎಲ್ಎಸಿ ಮತ್ತು ಪೂರ್ವ ಗಡಿಗಳಲ್ಲಿ ಸಾಂಪ್ರದಾಯಿಕ ಮತ್ತು ಹೈಬ್ರಿಡ್ ಯುದ್ಧ ಹಾಗೂ ಭಯೋತ್ಪಾದನೆ ನಿಗ್ರಹದ ಪ್ರಸ್ತುತ ಸಂಕೀರ್ಣ ಸ್ಥಿತಿಯನ್ನು ಎದುರಿಸಲು ಸುಮಾರು 4 ಲಕ್ಷ ಕ್ಲೋಸ್ ಕ್ವಾರ್ಟರ್ ಬ್ಯಾಟಲ್ ಕಾರ್ಬೈನ್‌ಗಳ ಇಂಡಕ್ಷನ್ಗೂ ಈ ಅನುಮೋದನೆ ದೊರೆತಿದೆ. ಇದು ಭಾರತದಲ್ಲಿನ ಸಣ್ಣ ಶಸ್ತ್ರಾಸ್ತ್ರ ಉತ್ಪಾದನಾ ಉದ್ಯಮಕ್ಕೆ ಪ್ರಮುಖ ಪ್ರಚೋದನೆ ಒದಗಿಸಲು ಮತ್ತು ಆತ್ಮನಿರ್ಭರ ಭಾರತವನ್ನು ಪ್ರೋತ್ಸಾಹಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.