ಔರಂಗಾಬಾದ್(ಬಿಹಾರ):ಪಂಚಾಯತ್ ಮುಖ್ಯಸ್ಥನ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತ ಅಭ್ಯರ್ಥಿಯೋರ್ವ ಹುಚ್ಚಾಟ ಮೆರೆದಿದ್ದಾನೆ. ದಲಿತರಿಬ್ಬರನ್ನು ಥಳಿಸಿ, ಒಬ್ಬನನ್ನು ನೆಲದ ಮೇಲೆ ಉಗುಳಿಸಿ, ಆ ಉಗುಳನ್ನು ನಾಲಿಗೆಯಿಂದ ನೆಕ್ಕುವಂತೆ ಮಾಡಿದ ಅಮಾನವೀಯ ಘಟನೆ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ತಾನು ಚುನಾವಣೆಯಲ್ಲಿ ಸೋತಿದ್ದಕ್ಕೆ ದಲಿತರೇ ಕಾರಣ ಎಂದು ಆರೋಪಿಸಿ, ಅವರಿಗೆ ಬಲ್ವಂತ್ ಸಿಂಗ್ ಎಂಬಾತ ಥಳಿಸಿದ್ದಾನೆ. ವಿಡಿಯೋ ವೈರಲ್ ಆದ ನಂತರ ಕ್ರಮ ಕೈಗೊಂಡಿರುವ ಪೊಲೀಸರು ಬಲ್ವಂತ್ ಸಿಂಗ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಅಂಬಾ ಪೊಲೀಸ್ ಠಾಣೆ ವ್ಯಾಪ್ತಿಯ ಡುಮ್ರಿ ಪಂಚಾಯತ್ನಲ್ಲಿ ಈ ಘಟನೆಯ ನಡೆಸಿದ್ದು, ಔರಂಗಾಬಾದ್ ಜಿಲ್ಲೆಯ ಜಿಲ್ಲಾಧಿಕಾರಿ ಸೌರಭ್ ಜೋರ್ವಾಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಕಾಂತೇಶ್ ಕುಮಾರ್ ಮಿಶ್ರಾ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.
ವೈರಲ್ ಆಗಿರುವ ಕ್ಲಿಪ್ನಲ್ಲಿ ಹಣ ತೆಗೆದುಕೊಂಡು ಮತ ಹಾಕಿಲ್ಲ ಎಂದು ಮಾತನಾಡಿಕೊಳ್ಳುತ್ತಿರುವುದು ಕೇಳಿಸುತ್ತದೆ. ಮದ್ಯಪಾನ ಮಾಡಿ, ಈ ಇಬ್ಬರೂ ಗ್ರಾಮದಲ್ಲಿ ಗಲಾಟೆ ಸೃಷ್ಟಿಸುತ್ತಿದ್ದ ಕಾರಣದಿಂದ ಅವರಿಬ್ಬರನ್ನು ಥಳಿಸಿದ್ದೇನೆ. ಆದ್ದರಿಂದ ಅವರು ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಬಲ್ವಂತ ಸಿಂಗ್ ಪೊಲೀಸರಿಗೆ ಹೇಳಿದ್ದಾನೆ. ಆದ್ರೆ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ:ಗುಜರಾತ್ನಲ್ಲಿ 'ಪಾಕಿಸ್ತಾನಿ ಆಹಾರೋತ್ಸವ'... ಬ್ಯಾನರ್ ಕಿತ್ತು ಬೆಂಕಿ ಹಚ್ಚಿದ ಬಜರಂಗದಳ