ಕರ್ನಾಟಕ

karnataka

ETV Bharat / bharat

ಪಡುಕೋಣೆ ಕುಟುಂಬಕ್ಕೆ ಸುತ್ತಿಕೊಂಡ ಕೋವಿಡ್​; ನಟಿ ದೀಪಿಕಾಗೂ ಸೋಂಕು ದೃಢ - ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆಗೂ ಸೋಂಕು ದೃಢವಾಗಿದೆ. ಪ್ರಸ್ತುತ ಅವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿದ್ದಾರೆ ಎನ್ನಲಾಗುತ್ತಿದೆ. ತಂದೆ ಪ್ರಕಾಶ್​ ಪಡುಕೋಣೆ ಅವರಿಗೆ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೆ ಡಿಪ್ಪಿಯ ವರದಿಯಲ್ಲಿಯೂ ಪಾಸಿಟಿವ್​ ಕಾಣಿಸಿಕೊಂಡಿದೆ.

Deepika Padukone tests covid +
ನಟಿ ದೀಪಿಕಾ

By

Published : May 4, 2021, 10:03 PM IST

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆಗೆ ಕೊರೊನಾ ದೃಢಪಟ್ಟಿದೆ. ಇಂದು ಬೆಳಗ್ಗೆ ಅವರು ಟೆಸ್ಟ್​ ಮಾಡಿಕೊಂಡಿದ್ದು ವರದಿಯಲ್ಲಿ ಪಾಸಿಟಿವ್​ ಕಾಣಿಸಿಕೊಂಡಿದೆ.

ಈ ಬಗ್ಗೆ ಸ್ವತಃ ಟ್ವೀಟ್​ ಮಾಡಿ ಖಚಿತಪಡಿಸಿರುವ ದೀಪಿಕಾ, ನನಗೂ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್​ ಆಗಿರುವುದಾಗಿ ತಿಳಿಸಿದ್ದಾರೆ.

ಲೆಜೆಂಡರಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್​ ಪಡುಕೋಣೆ ಅವರಲ್ಲಿಯೂ ಪಾಸಿಟಿವ್​ ಕಾಣಿಸಿಕೊಂಡಿದ್ದು, ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

ಪಡುಕೋಣೆ ಕುಟುಂಬ

ಸುಮಾರು 10 ದಿನಗಳ ಹಿಂದೆ ಪ್ರಕಾಶ್ ಪಡುಕೋಣೆ, ಅವರ ಪತ್ನಿ (ಉಜ್ವಲಾ) ಮತ್ತು ದ್ವಿತೀಯ ಪುತ್ರಿಗೆ (ಅನಿಶಾ) ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿದ್ದವು. ನಂತರ ಪರೀಕ್ಷೆಗೊಳಗಾದಾದ ಅವರಿಗೆ ಪಾಸಿಟಿವ್ ಕಂಡು ಬಂದಿತ್ತು

ABOUT THE AUTHOR

...view details