ಕರ್ನಾಟಕ

karnataka

ETV Bharat / bharat

ಆ ಒಂದು ಸನ್ನಿವೇಶಕ್ಕೆ ಬರೋಬ್ಬರಿ 48 ರಿಟೇಕ್​ ಪಡೆದರಂತೆ ದೀಪಿಕಾ! - ರೊಮ್ಯಾನ್ಸ್​ ಸನ್ನಿವೇಶದಲ್ಲಿ ನಟಿಸಲು 48 ರಿಟೇಕ್​ ಪಡೆದ ದೀಪಿಕಾ

ಗೆಹ್ರಿಯಾನ್ ಸಿನಿಮಾ ಪ್ರಚಾರದ ವೇಳೆ ತಾವು ಈ ಸಿನಿಮಾದ ಸನ್ನಿವೇಶವೊಂದರಲ್ಲಿ ನಟಿಸಲು 48 ರಿಟೇಕ್​ ಪಡೆದುಕೊಂಡ ಕುತೂಹಲಕಾರಿ ವಿಷಯವನ್ನು ದೀಪಿಕಾ ಹಂಚಿಕೊಂಡಿದ್ದಾರೆ.

gehraiyaan-movie
ದೀಪಿಕಾ ಪಡುಕೋಣೆ

By

Published : Jan 22, 2022, 9:16 PM IST

ಬಾಲಿವುಡ್​ನ ಹಾಟ್​ ಬೆಡಗಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ಅವರ ಮೈಮಾಟವೇ ಮಾದಕ. ನಟನೆ ವಿಷಯಕ್ಕೆ ಬಂದರೆ ಯಾವುದೇ ಪಾತ್ರಕ್ಕೂ ಸೈ. ಒನ್​ಟೇಕ್​ ಆರ್ಟಿಸ್ಟ್​ ಎಂದೇ ಖ್ಯಾತರು. ಇಂತಹ ನಟಿ ಗೆಹ್ರಿಯಾನ್​ ಸಿನಿಮಾದ ಒಂದು ಸನ್ನಿವೇಶಕ್ಕಾಗಿ ಬರೋಬ್ಬರಿ 48 ರಿಟೇಕ್​ ತೆಗೆದುಕೊಂಡಿದ್ದರಂತೆ..!

ಹೌದು, ಗೆಹ್ರಿಯಾನ್ ಸಿನಿಮಾ ಪ್ರಚಾರದ ವೇಳೆ ತಾವು ಈ ಸಿನಿಮಾದ ಸನ್ನಿವೇಶವೊಂದರಲ್ಲಿ ನಟಿಸಲು ಬರೋಬ್ಬರಿ 48 ಟೇಕ್​ ಪಡೆದುಕೊಂಡ ಕುತೂಹಲಕಾರಿ ವಿಷಯವನ್ನು ದೀಪಿಕಾ ಹಂಚಿಕೊಂಡಿದ್ದಾರೆ.

ಗೆಹ್ರಿಯಾನ್​ ಸಿನಿಮಾದ ಆ ಸನ್ನಿವೇಶದಲ್ಲಿ ನಟಿಸಲು 48 ರಿಟೇಕ್​ ಪಡೆದ ದೀಪಿಕಾ ಪಡುಕೋಣೆ

ನಟ ಸಿದ್ಧಾಂತ್​ ಜೊತೆ ರೊಮ್ಯಾನ್ಸ್​ ಮಾಡುವ ಸೀನ್​ ಅದಾಗಿದ್ದು, ಆ ಸನ್ನಿವೇಶದಲ್ಲಿ ನಟನೆ ಮಾಡುವುದು ನನಗೆ ಭಾರಿ ಸವಾಲಿನದ್ದಾಗಿತ್ತು. ಅಲ್ಲದೇ, ಸಿದ್ದಾಂತ್​ ಜೊತೆ ರೊಮ್ಯಾನ್ಸ್​ ಮಾಡುವ ಆ ಸೀನ್​ನಲ್ಲಿ ನಟಿಸಲು ಸಿಕ್ಕಾಪಟ್ಟೆ ಮುಜುಗರ ಉಂಟಾಯಿತು. ಇದರಿಂದಾಗಿ 48 ಸಲ ರೀಟೇಕ್​ ಪಡೆದುಕೊಳ್ಳಬೇಕಾಯಿತು ಎಂದು ತಮ್ಮ ಅನುಭವದ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಗೆಹ್ರಿಯಾನ್​ ಸಿನಿಮಾ ಫೆಬ್ರವರಿ 11 ರಂದು ಒಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ. ಅಲ್ಲದೇ, ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ದೀಪಿಕಾ ಮತ್ತು ನಟ ಸಿದ್ಧಾಂತ್ ಸಿನಿಮಾದಲ್ಲಿ​ ಬೋಲ್ಡ್​ ಆಗಿ ನಟಿಸಿದ್ದಾರೆ. ವಿಶೇಷವಾಗಿ ದೀಪಿಕಾ ಪಡುಕೋಣೆ ತುಂಡುಡುಗೆಯಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:Watch : ವೀಕೆಂಡ್​ನಲ್ಲಿ ಮುದ್ದು ಮಗಳು ಐರಾಗೆ ಅಆಇಈ ಕಲಿಸಿದ ಯಶ್​

ABOUT THE AUTHOR

...view details