ಕರ್ನಾಟಕ

karnataka

ETV Bharat / bharat

ಕ್ಯಾಲಿಫೋರ್ನಿಯಾ ಸ್ನೇಹಿತೆ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ ದೀಪ್​ ಸಿಧು.!? - ಟ್ರ್ಯಾಕ್ಟರ್ ಪರೇಡ್​ ವೇಳೆ ನಡೆದ ಹಿಂಸಾಚಾರ

ನಟ ದೀಪ್ ಸಿಧು ಅವರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಸ್ನೇಹಿತೆಯ ಸಹಾಯದಿಮದ ಹಿಂಸಾಚಾರದ ಬಗ್ಗೆ ತನಿಖಾಧಿಕಾರಿಗಳ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಕ್ಯಾಲಿಫೋರ್ನಿಯಾ ಸ್ನೇಹಿತೆ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ ದೀಪ್​ ಸಿಧು.!?
ಕ್ಯಾಲಿಫೋರ್ನಿಯಾ ಸ್ನೇಹಿತೆ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ ದೀಪ್​ ಸಿಧು.!?

By

Published : Feb 9, 2021, 3:13 PM IST

Updated : Feb 9, 2021, 4:49 PM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26 ರಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧನಕ್ಕೊಳಗಾದ ನಟ ದೀಪ್ ಸಿಧು ಅವರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಸ್ನೇಹಿತೆಯ ಸಹಾಯದಿಂದ ಹಿಂಸಾಚಾರದ ಬಗ್ಗೆ ತನಿಖಾಧಿಕಾರಿಗಳ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ದೀಪ್​ ಸಿಧು ಬಂಧನ

ದೀಪ್​ ಸಿಧು ಕ್ಯಾಲಿಫೋರ್ನಿಯಾದಲ್ಲಿ ವಾಸಿಸುವ ತಮ್ಮ ಸ್ನೇಹಿತೆಯ ಸಂಪರ್ಕದಲ್ಲಿದ್ದರು. ಸಿಧು ವಿಡಿಯೋಗಳನ್ನು ಮಾಡಿ ಸ್ನೇಹಿತೆಗೆ ಕಳುಹಿಸುತ್ತಿದ್ದರು. ಆಕೆ ಅವುಗಳನ್ನು ಫೇಸ್​ಬುಕ್​ ಖಾತೆಗೆ ಅಪ್ಲೋಡ್ ಮಾಡುತ್ತಿದ್ದರು. ಹಾಗೆ ಮಾಡುವ ಮೂಲಕ, ಟ್ರ್ಯಾಕ್ಟರ್ ಪರೇಡ್​ ವೇಳೆ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸುವ ಏಜೆನ್ಸಿಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ.

ಇದನ್ನೂ ಓದಿ:ಬಾಲಿವುಡ್​ 'ಲವರ್​ ಬಾಯ್​' ರಾಜೀವ್​ ಕಪೂರ್​ ವಿಧಿವಶ...

ಜನವರಿ 26 ರ ಹಿಂಸಾಚಾರ ಪ್ರಕರಣದ ಆರೋಪಿ ದೀಪ್ ಸಿಧುನನ್ನು ಚಂಡೀಗಢ ಮತ್ತು ಅಂಬಾಲಾ ನಡುವಿನ ಜಿರಾಕ್‌ಪುರ ಪ್ರದೇಶದಿಂದ ಇಂದು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Last Updated : Feb 9, 2021, 4:49 PM IST

ABOUT THE AUTHOR

...view details