ಬಿಲಾಸ್ಪುರ್: ಸರಪಂಚ್ನೊಬ್ಬ ಆದಿವಾಸಿ ಕುಟುಂಬಕ್ಕೆ ಐವತ್ತು ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದ. ಕೂಲಿ ಮಾಡಿ ದುಡಿಯುವ ಬುಡಕಟ್ಟು ಕುಟುಂಬವು ಹಣವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಆ ಕುಟುಂಬವನ್ನು ಗ್ರಾಮದಿಂದ ಹೊರಗೆ ಹಾಕಿದ್ದಾನೆ. ಇದೀಗ ಆ ಸಂತ್ರಸ್ತ ಕುಟುಂಬ ಮನೆ ಮನೆಗೆ ಅಲೆದಾಡುತ್ತಿದೆ. ಈ ಪ್ರಕರಣ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಲ್ಕಾ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ: ಖುಸ್ರೋ ಗ್ರಾಮದ ರಾಧೆ ನಾಯಕ್ ಎಂಬುವವರ ಮೇಕೆಯನ್ನು ಚಂದ್ರಮತಿಯ ಹಿರಿಯ ಮಗ ತೋರನ್ ತಂದಿದ್ದಾನೆ. ಆದರೆ ಗ್ರಾಮಸ್ಥರು ನಿಮ್ಮ ಮಗ ಈ ಮೇಕೆಯನ್ನು ಕಳ್ಳತನ ಮಾಡಿ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆಗ ಗ್ರಾಮಸ್ಥರು ಚಂದ್ರಮತಿ ಹಾಗೂ ಆಕೆಯ ಕುಟುಂಬದೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ, ಕೆಲ ಗ್ರಾಮಸ್ಥರು ಚಂದ್ರಮತಿ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಚಂದ್ರಮತಿ ಕುಟುಂಬಕ್ಕೆ ಯಾರೂ ಪಡಿತರ ಸಾಮಗ್ರಿ ನೀಡಬಾರದೆಂದು ಘೋಷಿಸಿದ್ದಾರೆ. ನಂತರ ಸಂತ್ರಸ್ತ ಕುಟುಂಬದ ಮಗ ತಂದಿದ್ದ ಮೇಕೆಯನ್ನು ಗ್ರಾಮಸ್ಥರು ಹಿಂತಿರುಗಿಸಿದ್ದಾರೆ.
ಓದಿ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಮಾಜಿ ಸಿಎಂ ಬಿಎಸ್ವೈ ಸ್ಪಷ್ಟನೆ
ಮೇಕೆಯನ್ನು ಹಿಂತಿರುಗಿಸಿದ ನಂತರವೂ ವಿವಾದ ಹಾಗೆಯೇ ಉಳಿದಿತ್ತು. ಈ ವೇಳೆ, ಸರಪಂಚ್ ಭುವನ್ ಸಿಂಗ್ ಜಗತ್ ಈ ವಿಷಯವನ್ನು ಮುಚ್ಚಿ ಹಾಕೋಕೆ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಆದರೆ ಸಂತ್ರಸ್ತ ಕುಟುಂಬದವರು ಹಣ ನೀಡೋದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಈ ಕುಟುಂಬಕ್ಕೆ ಒದಗಿಸುತ್ತಿರುವ ನೀರಿನ ಕಲೆಕ್ಷನ್ ನಿಲ್ಲಿಸುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಗಿರಿಜನ ಕುಟುಂಬವನ್ನು ಗ್ರಾಮ ಬಿಟ್ಟು ಹೋಗುವಂತೆ ಆದೇಶಿಸಿದ್ದಾನೆ. ಸರಪಂಚ್ ಭುವನ್ ಸಿಂಗ್ ಜಗತ್ ಆದೇಶದ ನಂತರ ಸಂತ್ರಸ್ತರಿಗೆ ಪಡಿತರ ಮತ್ತು ನೀರು ಸಿಗದೇ ಸಾಕಷ್ಟು ತೊಂದರೆಗೊಳಗಾದರು.
ಮಹಿಳೆಯಿಂದ ದೂರು:ಪ್ರಕರಣದ ಸಂಬಂಧ ಸಂತ್ರಸ್ತ ಮಹಿಳೆ ಚಂದ್ರಮತಿ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಗಾಗಿ ಗ್ರಾಮಕ್ಕೆ ಸಿಬ್ಬಂದಿಯನ್ನು ಕಳುಹಿಸಿದ್ದು, ಸಂತ್ರಸ್ತೆಯ ಕುಟುಂಬ ಪತ್ತೆಯಾಗಿಲ್ಲ. ಅವರೆಲ್ಲರೂ ಹಳ್ಳಿಯಿಂದ ಬೇರೆಡೆ ಹೋಗಿದ್ದಾರೆ. ಸಂತ್ರಸ್ತೆಯ ಕುಟುಂಬದವರು ಬಂದ ನಂತರ ಈ ಬಗ್ಗೆ ಸರಿಯಾದ ಮಾಹಿತಿ ದೊರೆಯಲಿದೆ ಎಂದು ಹೇಳಿದರು.