ಕರ್ನಾಟಕ

karnataka

ETV Bharat / bharat

ಚಿಕಿತ್ಸೆಗಾಗಿ ಸೆ.20 ರಂದು ಲಾಲು ಪ್ರಸಾದ್ ಯಾದವ್ ಸಿಂಗಾಪುರಕ್ಕೆ - ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್

ಬಲ್ಲ ಮೂಲಗಳ ಪ್ರಕಾರ, ಆರ್​ಜೆಡಿ ಮುಖ್ಯಸ್ಥರನ್ನು ಸಿಂಗಾಪುರಕ್ಕೆ ಕರೆದೊಯ್ಯುವ ವ್ಯವಸ್ಥೆಗಳು ಅಂತಿಮ ಹಂತದಲ್ಲಿವೆ. ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಹಿರಿಯ ಪುತ್ರಿ ಮಿಸಾ ಭಾರತಿ ಸೇರಿದಂತೆ ಆರ್‌ಜೆಡಿ ಮುಖ್ಯಸ್ಥರ ಕುಟುಂಬ ಸದಸ್ಯರು ಲಾಲು ಜೊತೆ ತೆರಳುವ ಸಾಧ್ಯತೆ ಇದೆ.

ಚಿಕಿತ್ಸೆಗಾಗಿ ಸೆ.20 ರಂದು ಲಾಲು ಪ್ರಸಾದ್ ಯಾದವ್ ಸಿಂಗಾಪುರಕ್ಕೆ
Decks cleared for Lalus visit to Singapore for treatment

By

Published : Sep 16, 2022, 5:54 PM IST

ರಾಂಚಿ (ಜಾರ್ಖಂಡ್):ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ವೈದ್ಯಕೀಯ ಚಿಕಿತ್ಸೆಗಾಗಿ ಸೆಪ್ಟೆಂಬರ್ 20 ರಂದು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಠೇವಣಿ ಇರಿಸಿದ್ದ ಅವರ ಪಾಸ್‌ಪೋರ್ಟ್ ಬಿಡುಗಡೆಯಾಗಿದೆ. ವಿಶೇಷ ನ್ಯಾಯಾಲಯ ಶುಕ್ರವಾರ ಸಿಬಿಐ ಅಧಿಕಾರಿಗಳಿಗೆ ಪಾಸ್‌ಪೋರ್ಟ್ ಬಿಡುಗಡೆ ಮಾಡುವಂತೆ ಸೂಚಿಸಿದೆ. ಸದ್ಯ ಲಾಲು ಪ್ರಸಾದ್ ಯಾದವ್ ಜಾಮೀನಿನ ಮೇಲೆ ಹೊರಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪ್ರಸಾದ್ ತಮ್ಮ ಪಾಸ್ ಪೋರ್ಟ್ ಹಿಂತಿರುಗಿಸುವಂತೆ ಒತ್ತಾಯಿಸಿದ್ದರು.

ಬಲ್ಲ ಮೂಲಗಳ ಪ್ರಕಾರ, ಆರ್​ಜೆಡಿ ಮುಖ್ಯಸ್ಥರನ್ನು ಸಿಂಗಾಪುರಕ್ಕೆ ಕರೆದೊಯ್ಯುವ ವ್ಯವಸ್ಥೆಗಳು ಅಂತಿಮ ಹಂತದಲ್ಲಿವೆ. ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಹಿರಿಯ ಪುತ್ರಿ ಮಿಸಾ ಭಾರತಿ ಸೇರಿದಂತೆ ಆರ್‌ಜೆಡಿ ಮುಖ್ಯಸ್ಥರ ಕುಟುಂಬ ಸದಸ್ಯರು ಲಾಲು ಜೊತೆ ತೆರಳುವ ಸಾಧ್ಯತೆ ಇದೆ.

ಅನಾರೋಗ್ಯದಲ್ಲಿರುವ ಆರ್‌ಜೆಡಿ ಮುಖ್ಯಸ್ಥರು ಸಿಂಗಾಪುರಕ್ಕೆ ಭೇಟಿ ನೀಡಲು ಜಾರ್ಖಂಡ್ ಹೈಕೋರ್ಟ್‌ನಿಂದ ಅನುಮತಿ ಪಡೆದಿದ್ದಾರೆ. ಕೆಲ ವಾರಗಳ ಹಿಂದೆಯೇ ಸಿಂಗಾಪುರಕ್ಕೆ ಹೊರಡಲು ನಿರ್ಧರಿಸಲಾಗಿತ್ತು. ಆದರೆ, ಅವರ ಬಲ ಭುಜದ ಮುರಿತದ ಕಾರಣ ವಿಳಂಬವಾಯಿತು ಎಂದು ಆರ್‌ಜೆಡಿ ಮುಖ್ಯಸ್ಥರ ಆಪ್ತ ಸಹಾಯಕರೊಬ್ಬರು ಹೇಳಿದರು.

ಬಲ ಭುಜದ ಮೂಳೆ ಮುರಿತದಿಂದ ಚೇತರಿಸಿಕೊಳ್ಳುತ್ತಿರುವ ಮತ್ತು ಬಹು ಕಾಯಿಲೆಗಳಿಂದ ಬಳಲುತ್ತಿರುವ ಆರ್‌ಜೆಡಿ ಮುಖ್ಯಸ್ಥರು ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ಆರ್‌ಜೆಡಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಶ್ಯಾಮ್ ರಜಾಕ್ ಖಚಿತಪಡಿಸಿದ್ದಾರೆ.

ಇದನ್ನು ಓದಿ:ದೆಹಲಿ ಮದ್ಯ ನೀತಿ ಹಗರಣ: ಬೆಂಗಳೂರು, ಚೆನ್ನೈನಲ್ಲಿ ಆಂಧ್ರ ಸಂಸದನ ನಿವಾಸಗಳ ಮೇಲೆ ಇಡಿ ದಾಳಿ

ABOUT THE AUTHOR

...view details