ನವದೆಹಲಿ: 'ಯುಪಿಎ ಎಂಬುದು ಈಗ ಉಳಿದಿಲ್ಲ' ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇದೀಗ ಶಿವಸೇನೆಯ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ. ಈ ನಿಟ್ಟಿನಲ್ಲಿಂದು ದೆಹಲಿಯಲ್ಲಿ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಹಾಗೂ ರಾಹುಲ್ ಗಾಂಧಿ ಸುದೀರ್ಘ ಚರ್ಚೆ ನಡೆಸಿದರು.
ಈ ವೇಳೆ, ಮಹಾರಾಷ್ಟ್ರದಲ್ಲಿನ ಮೈತ್ರಿ ಸರ್ಕಾರ ಹಾಗೂ ಯುಪಿಎ ಸೇರುವ ವಿಚಾರವಾಗಿ ಮಹತ್ವದ ಮಾತುಕತೆ ನಡೆಯಿತು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಇಲ್ಲದೇ ಯಾವುದೇ ಪ್ರತಿಪಕ್ಷ ಇಲ್ಲ ಎಂದಿರುವ ರಾವತ್, ಆದಷ್ಟು ಬೇಗ ಯುಪಿಎ ಸೇರಿಕೊಳ್ಳುವ ಬಗ್ಗೆ ಶಿವಸೇನೆ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. ಆಡಳಿತ ಪಕ್ಷ ಬಿಜೆಪಿ ವಿರುದ್ಧ ಒಂದೇ ಪ್ರತಿಪಕ್ಷ ಇರಬೇಕು. ಆದರೆ, ಕಾಂಗ್ರೆಸ್ ಇಲ್ಲದೇ ಪ್ರತಿಪಕ್ಷ ಇರಲು ಸಾಧ್ಯವಿಲ್ಲ ಎಂದರು. ಮೂರರಿಂದ ನಾಲ್ಕು ವಿಪಕ್ಷಗಳನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದರು.