ನವದೆಹಲಿ: ಕಾಂಗ್ರೆಸ್ನ ಪದಾಧಿಕಾರಿಗಳಲ್ಲಿ ಶೇ 50ರಷ್ಟು ಮಂದಿ 50 ವರ್ಷ ವಯೋಮಿತಿಯೊಳಗೆ ಇರಬೇಕು ಎಂಬ ನಿಲುವನ್ನು ಎಐಸಿಸಿ ಹೊಂದಿದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ. ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಯೊಬ್ಬ ಪದಾಧಿಕಾರಿಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುತ್ತೇವೆ. ಪದಾಧಿಕಾರಿಗಳ ವಯಸ್ಸು 50ಕ್ಕಿಂತ ಕಡಿಮೆ ಇರಬೇಕು ಎಂದು ನಿರ್ಧರಿಸಲಾಗಿದೆ. 50ರ ಅಡಿ 50 ಎಂಬ ನಿರ್ಧಾರಕ್ಕೆ ಬರಲಾಗಿದೆ. ಪಕ್ಷದಲ್ಲಿ 50ಕ್ಕಿಂತ ಕಡಿಮೆ ವಯಸ್ಸಿನ ಯುವ ಸಮುದಾಯವನ್ನು ಪ್ರತಿನಿಧಿಸುವ ಸಾಕಷ್ಟು ಜನರು ಇರಬೇಕು ಎಂದು ನಿರ್ಧರಿಸಲಾಗಿದೆ. ಇದನ್ನು ಕೇವಲ ಹದಿನೈದು ದಿನದಲ್ಲಿ ನಾವು ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಗುರಿ ಸಾಧಿಸಲು ಕೆಲವು ಸಮಯ ಆಗುತ್ತದೆ. ಇದು ಪ್ರಕ್ರಿಯೆ ಹಂತದಲ್ಲಿದ್ದು, ಶೀಘ್ರವೇ 50ಕ್ಕಿಂತ ಕಡಿಮೆ ವಯೋಮಾನದ ಪ್ರತಿನಿಧಿಗಳು ಸ್ಥಾನ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಪಕ್ಷಗಳು ಒಟ್ಟಾಗಬೇಕಿದೆ: ಕಳೆದ ಸಂಸತ್ತು ಅಧಿವೆಶನದಲ್ಲಿ ಸಮನ ಮನಸ್ಕ ಪಕ್ಷದ ಮುನ್ನಡೆಸಲು ಕ್ರಮಕ್ಕೆ ಮುಂದಾದರು. ಜೊತೆಗೆ ಎಲ್ಲರ ಧ್ವನಿಯೊಂದಿಗೆ ಅವರು ಅದಾನಿ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರು. ನಾವು ಬಿಜೆಪಿ ವಿರುದ್ದ ಹೋಗೋಣ ಎಂಬುದನ್ನು ಚಿಂತಿಸಿದ್ದೇವೆ. ಈ ಮೂಲಕ ಬಿಜೆಪಿ ವಿರೋಧಿ ಮತ ವಿಭಜನೆಯಾಗದಂತೆ ಮುದಾಗಲಾಗುವುದು. ಕಾಂಗ್ರೆಸ್ ಎಷ್ಟೇ ಬೆಲೆ ತೆತ್ತಾದರೂ ಹೋರಾಡುತ್ತದೆ. ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲು ಪ್ರತಿಪಕ್ಷಗಳ ಒಗ್ಗಟ್ಟು ಅವಶ್ಯಕವಾಗಿದೆ. ಮಾಧ್ಯಮ ಸೇರಿದಂತೆ ಹೋರಾಡುವ ಹಾದಿಗಳು ತಪ್ಪಿದೆ. ಹಾಗಾಗಿ ವಿಪಕ್ಷಗಳು ಒಗ್ಗೂಡುವ ಮೂಲಕ ಬಲವಾಗಿ ಹೋರಾಟ ನಡೆಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.