ಭೋಪಾಲ್(ಮಧ್ಯಪ್ರದೇಶ): ಡಾ.ಜಿಕೆ ಅಗರ್ವಾಲ್ ತಮ್ಮ ವೃತ್ತಿಯ ಜತೆ ವಿಭಿನ್ನ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮನೆಯಲ್ಲಿಯೇ ಚಿಕ್ಕದಾದ ನರ್ಸರಿ ಹಾಗೂ ದಶಕಗಳ ಹಿಂದಿನ ನಾಣ್ಯ ಮತ್ತು ಅಂಚೆ ಚೀಟಿಗಳ ಸಂಗ್ರಹ ಹೊಂದಿದ್ದಾರೆ. ಅವರ ನರ್ಸರಿಯಲ್ಲಿ ಮಾಮೂಲಿಯಷ್ಟೇ ಅಲ್ಲ, ಔಷಧಿ ಸಸ್ಯಗಳು ಹಾಗೂ ಬೇರೆಲ್ಲೂ ಕಾಣಲು ಸಿಗದ ವಿಶೇಷ ಗಿಡಗಳಿವೆ.
ಪ್ರತಿಯೊಬ್ಬರು ತಮ್ಮ ವೃತ್ತಿಯೊಂದಿಗೆ ಬೇರೆ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ, ಇಂತಹ ಅಪರೂಪದ ಹವ್ಯಾಸ ಬೆಳೆಸಿಕೊಳ್ಳೋರು ಅಪರೂಪ. ಇವರು ತಮ್ಮ ಮನೆಯ ಮೇಲೆ ರುದ್ರಾಕ್ಷಿ, ಕಾಫಿ, ರಾಮ್ಫಾಲ್, ಮಲ್ಬೆರಿ, ಅಂಜೂರ, ಬೇವಿನ ಗಿಡಗಳನ್ನ ನೆಟ್ಟು ಪೋಷಿಸುತ್ತಿದ್ದಾರೆ. ಇದಲ್ಲದೆ ಮಾವು, ಪೇರಲ, ಕಲ್ಲಂಗಡಿ ಸೇರಿ 50ಕ್ಕೂ ಹೆಚ್ಚು ಹಣ್ಣು ನೀಡುವ ಸಸ್ಯಗಳನ್ನ ಬೆಳೆಸಿದ್ದಾರೆ.