ಕರ್ನಾಟಕ

karnataka

By

Published : Jan 20, 2022, 6:19 PM IST

ETV Bharat / bharat

ಲಸಿಕೆ ನೀಡಿದ್ದಕ್ಕೆ ಕೋವಿಡ್‌ 3ನೇ ಅಲೆಯಲ್ಲಿ ಸಾವಿನ ಪ್ರಮಾಣ ತಗ್ಗಿದೆ - ಐಸಿಎಂಆರ್‌

ಕೋವಿಡ್‌ ಲಸಿಕೆ ನೀಡಿದ ಪರಿಣಾಮ 3ನೇ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ - ಐಸಿಎಂಆರ್‌ ದೆಹಲಿಯಲ್ಲಿಂದು ತಿಳಿಸಿದೆ.

Deaths have considerably reduced due to vaccinations: DG ICMR Dr Balram Bhargava
ಲಸಿಕೆ ನೀಡಿದ್ದಕ್ಕೆ ಕೋವಿಡ್‌ 3ನೇ ಅಲೆಯಲ್ಲಿ ಸಾವಿನ ಪ್ರಮಾಣ ತಗ್ಗಿದೆ - ಐಸಿಎಂಆರ್‌

ನವದೆಹಲಿ: ದೇಶದಲ್ಲಿ ಜನರಿಗೆ ಕೋವಿಡ್‌ ಲಸಿಕೆ ನೀಡಿದ ಪರಿಣಾಮವಾಗಿ ಕೊರೊನಾ 3ನೇ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಆಗಿದೆ ಎಂದು ಐಸಿಎಂಆರ್‌ ಪ್ರಧಾನ ವ್ಯವಸ್ಥಾಪಕ ಡಾ.ಬಲರಾಂ ಭಾರ್ಗವ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ತೀವ್ರ ಅನಾರೋಗ್ಯದ ಪರಿಸ್ಥಿತಿ ಇಲ್ಲ. ಲಸಿಕೆ ನೀಡಿರುವುದರಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿಲ್ಲ ಎಂದು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,17,532 ಕೋವಿಡ್‌ ಹೊಸ ಪ್ರಕರಣಗಳು ದಾಖಲಾಗಿದ್ದು, 380 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 19,24,051 ಇದೆ. ಸಂಪೂರ್ಣವಾಗಿ ಲಸಿಕೆ ಪಡೆದಿರುವ ಪ್ರಮಾಣ ಶೇ.72 ರಷ್ಟಿದೆ ಎಂದು ಐಸಿಎಂಆರ್‌ ಎಂಡಿ ಮಾಹಿತಿ ನೀಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details