ಕರ್ನಾಟಕ

karnataka

ETV Bharat / bharat

ಲಸಿಕೆ ಪಡೆದರೆ ಎರಡು ವರ್ಷಗಳಲ್ಲಿ ತೊಂದರೆ ಆಗುತ್ತಾ? ವದಂತಿಯ Fact check ಇಲ್ಲಿದೆ..! ನಿಜ ಇಷ್ಟೇ? - ಪಿಬಿಐ ಫ್ಯಾಕ್ಟ್​ ಚೆಕ್​​ ಸ್ಪಷ್ಟೀಕರಣ

ಕೊರೊನಾ ಸೃಷ್ಟಿಸುತ್ತಿರುವ ವಿನಾಶದ ವಿರುದ್ಧ ಜಗತ್ತು ಲಸಿಕೆಯೆಂಬ ಆಯುಧದ ಮೊರೆ ಹೋಗಿದೆ. ಹಾಗಾದರೆ ಲಸಿಕೆ ನಿಜವಾಗಿಯೂ ಜನರನ್ನು ಕೋವಿಡ್​ ಮಹಾಮಾರಿಯಿಂದ ಬದುಕುಳಿಸುತ್ತದೆಯೇ ..? ಲಸಿಕೆಯ ಅಡ್ಡಪರಿಣಾಮಗಳು ಯಾವುವು? ಎಂಬ ಹಲವು ಪ್ರಶ್ನೆಗಳು ಹುಟ್ಟುಕೊಂಡಿರುವ ಬೆನ್ನಲ್ಲೇ, ಅದು ಸಾಲದೆಂಬಂತೆ ಇದೀಗ ಲಸಿಕೆ ಪಡೆದರೆ ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬ ಗಾಳಿ ಸುದ್ದಿಯೊಂದು ಹರಡುತ್ತಿದೆ. ಇದು ನಿಜವೇ.? ಇಲ್ಲಾ ವದಂತಿಯೇ.? ಎಂಬುದರ ಫ್ಯಾಕ್ಟ್​​ ಚೆಕ್​ ಇಲ್ಲಿದೆ

ಲಸಿಕೆ
ಲಸಿಕೆ

By

Published : May 28, 2021, 4:55 PM IST

ಕೊರೊನಾ ಜಗತ್ತನ್ನು ನಡುಗಿಸುತ್ತಿದೆ. ಈ ರೋಗದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಸಾಲದೆಂಬಂತೆ ಕೊರೊನಾ ಸೆಕೆಂಡ್ ವೇವ್ ಕೂಡ ಮುಂದುವರೆದಿದೆ. ಇದೀಗ ಮಹಾಮಾರಿಯನ್ನು ನಿಯಂತ್ರಿಸುವ ಏಕೈಕ ಮಾರ್ಗ ಎಂದರೆ ವ್ಯಾಕ್ಸಿನೇಷನ್​ ಎಂದು ತಜ್ಞರು ಹೇಳುತ್ತಿದ್ದಾರೆ. ಅನೇಕ ದೇಶಗಳಲ್ಲಿ ಶೇಕಡಾ 50ರಷ್ಟು ಲಸಿಕಾ ಕಾರ್ಯಕ್ರಮಗಳು ಈಗಾಗಲೇ ಪೂರ್ಣಗೊಂಡಿವೆ.

ಪಿಬಿಐ ಫ್ಯಾಕ್ಟ್​ ಚೆಕ್​​ ಸ್ಪಷ್ಟೀಕರಣ

ಗೊಂದಲದಲ್ಲಿ ಸಾಮಾನ್ಯ ಜನ

ಮತ್ತೊಂದೆಡೆ ಕೆಲವರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಕೆಲ ವದಂತಿಗಳು ಅವರ ಭಯವನ್ನು ಹೆಚ್ಚಿಸುತ್ತಿವೆ. ಈಗಿರುವ ಅನುಮಾನಗಳು ಸಾಲುವುದಿಲ್ಲ ಎಂಬಂತೆ ಆಘಾತಕಾರಿ ಸುದ್ದಿಯೊಂದು ಹರಿದಾಡುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವುದರಿಂದ ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬ ವದಂತಿ ಹುಟ್ಟಿಕೊಂಡಿದೆ. ಈ ಸುದ್ದಿ ಲಸಿಕೆ ಹಾಕಿಸಿಕೊಳ್ಳದವರನ್ನು ಮತ್ತು ಹಾಕಿಸಿಕೊಂಡವರಲ್ಲಿ ಆತಂಕ ಹುಟ್ಟಿಸುತ್ತಿದೆ. ಲಸಿಕೆಗಳನ್ನು ಹೊರತುಪಡಿಸಿ ವೈರಸ್ ವಿರುದ್ಧ ಹೋರಾಡಲು ಮತ್ತೊಂದು ದಾರಿ ಇಲ್ಲ ಎಂದು ತಜ್ಞರು ಹೇಳುತ್ತಿದ್ದರೇ, ವದಂತಿ ಹುಟ್ಟಿಸಿದವರ ಮಾತು ಕಟ್ಟಿಕೊಂಡು ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ.

ಈ ಗಾಳಿ ಸುದ್ದಿ ಕುರಿತು 'ಪಿಬಿಐ ಫ್ಯಾಕ್ಟ್ ಚೆಕ್' ನಡೆಸಿ ಸತ್ಯಾಂಶ ಬಹಿರಂಗಪಡಿಸಿದೆ. ಸದ್ಯ ಹರಿದಾಡುತ್ತಿರುವ ವದಂತಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಲಸಿಕೆಗಳು 100 ಪರ್ಸೆಂಟ್​ ಸುರಕ್ಷಿತವೆಂದು ಒತ್ತಿ ಹೇಳುತ್ತಿದೆ. ಇಂತಹ ವದಂತಿಗಳನ್ನು ನಂಬಿ ಲಸಿಕೆ ಹಾಕಿಸಿಕೊಳ್ಳದೇ ಆರೋಗ್ಯಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಸೂಚಿಸಿದೆ. ಸಮಾಜವನ್ನು ದಾರಿ ತಪ್ಪಿಸುವ ಮತ್ತು ಭೀತಿಯುಂಟು ಮಾಡುವ ವದಂತಿಗಳನ್ನು ಹರಡಿಸದಂತೆ ಜನರಲ್ಲಿ ಕೇಳಿ ಕೊಂಡಿದೆ.

ABOUT THE AUTHOR

...view details