ಕರ್ನಾಟಕ

karnataka

ETV Bharat / bharat

ಸೌಂದರ್ಯ ಕಣಿವೆಯಲ್ಲೊಂದು ಸಾವಿನ ಕೂಪ.. ಅರಾವಳಿ ಶ್ರೇಣಿಯ ಪರ್ವತದ ಮಧ್ಯೆ ಇದೆ 'ಬ್ಲಡಿ ಲೇಕ್' - ಡೆತ್ ವ್ಯಾಲಿ

ಸುತ್ತಲೂ ಹಸಿರು ಹೊದಿಕೆಯಿಂದ ಕೂಡಿರುವ ಈ ಸರೋವರದಲ್ಲಿ ತುಂಬಿದ ನೀರು ನಿಮ್ಮನ್ನು ತನ್ನತ್ತ ಆಕರ್ಷಿಸುತ್ತದೆ. ಸರೋವರದ ನೀರಿಗೆ ಹೋಗುವುದನ್ನು ತಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ, ಸರೋವರದ ನೀರಿಗೆ ಹೋದ ನಂತರ ಎಲ್ಲವೂ ಸಂಪೂರ್ಣವಾಗಿ ಅಸಾಮಾನ್ಯವಾಗುತ್ತದೆ.

Death valley in Faridabad
ಸೌಂದರ್ಯ ಕಣಿವೆಯಲ್ಲೊಂದು ಸಾವಿನ ಕೂಪ

By

Published : Mar 30, 2021, 6:03 AM IST

ಫರಿದಾಬಾದ್: ಅರಾವಳಿ ಶ್ರೇಣಿಯ ಪರ್ವತಗಳು ಸುಮಾರು 692 ಚದರ ಕಿಲೋಮೀಟರ್‌ಗಳಲ್ಲಿ ವ್ಯಾಪಿಸಿವೆ. ಈ ಪರ್ವತ ಶ್ರೇಣಿ ಅನೇಕ ರಹಸ್ಯಗಳಿಂದ ಕೂಡಿದೆ. ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಒಂದು ಭಯಾನಕ ಸರೋವರವಿದೆ. ಇದನ್ನು ಡೆತ್ ಲೇಕ್ ಅಂದರೆ 'ಡೆತ್ ವ್ಯಾಲಿ' ಅಂತಾನೇ ಕರೆಯಲಾಗುತ್ತದೆ. ಸರೋವರವು ನೋಡಲು ಶಾಂತ ಮತ್ತು ಸುಂದರವಾಗಿ ಕಾಣುತ್ತದೆ. ಆದರೆ, ಅಷ್ಟೇ ಅಪಾಯಕಾರಿ. ಒಂದೊಮ್ಮೆ ಈ ಸರೊವರದ ನೀರಿಗಿಳಿದರೆ ಆ ವ್ಯಕ್ತಿ ಮೇಲೆ ಎದ್ದು ಬರೋದು ಸಾಧ್ಯವೇ ಇಲ್ಲವಂತೆ.

ಸೌಂದರ್ಯ ಕಣಿವೆಯಲ್ಲೊಂದು ಸಾವಿನ ಕೂಪ

ಸುತ್ತಲೂ ಹಸಿರು ಹೊದಿಕೆಯಿಂದ ಕೂಡಿರುವ ಈ ಸರೋವರದಲ್ಲಿ ತುಂಬಿದ ನೀರು ನಿಮ್ಮನ್ನು ತನ್ನತ್ತ ಆಕರ್ಷಿಸುತ್ತದೆ. ಸರೋವರದ ನೀರಿಗೆ ಹೋಗುವುದನ್ನು ತಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ, ಸರೋವರದ ನೀರಿಗೆ ಹೋದ ನಂತರ ಎಲ್ಲವೂ ಸಂಪೂರ್ಣವಾಗಿ ಅಸಾಮಾನ್ಯವಾಗುತ್ತದೆ. ತಂಪಾಗಿ ಕಾಣುವ ಈ ನೀರು ನಿಮ್ಮ ಜೀವವನ್ನು ಬಲಿ ಪಡೆಯುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಯುವಕರು ಈ ಸರೋವರದ ಬಗ್ಗೆ ಇಂಟರ್ನೆಟ್ ಮೂಲಕ ಮಾಹಿತಿ ಪಡೆಯುತ್ತಾರೆ. ದೆಹಲಿ ಮತ್ತು ಸುತ್ತಮುತ್ತಲಿನ ಕಾಲೇಜುಗಳಲ್ಲಿ ಓದುತ್ತಿರುವ ಯುವಕರು, ಅಂತರ್ಜಾಲದಲ್ಲಿ ಈ ಸರೋವರದ ಬಗ್ಗೆ ಮಾಹಿತಿ ಪಡೆದು ಇಲ್ಲಿಗೆ ಬರುತ್ತಾರೆ. ಇಂಟರ್ನೆಟ್​ನಲ್ಲಿ ಈ ಸರೋವರದ ಹೆಸರು 'ಡೆತ್ ವ್ಯಾಲಿ' ಅಥವಾ 'ಬ್ಲಡಿ ಲೇಕ್' ಎಂದಿದೆ.

ಸರೋವರದಲ್ಲಿ ಮುಳುಗಿ ಸಾವನ್ನಪ್ಪುವವರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಲೇ ಇದೆ. ಈ ಸಾವುಗಳಿಗೆ ಮುಖ್ಯ ಕಾರಣ ಸರೋವರದ ಆಳ ತಿಳಿಯದಿರುವುದು. ಈ ಕಾರಣದಿಂದಾಗಿ ಜನರು ನೀರಿಗೆ ಹೋದ ನಂತರ ಮುಳುಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಸರೋವರದಲ್ಲಿ ಮುಳುಗಿ ಅನೇಕ ಜನ ಸಾವನ್ನಪ್ಪಿದ್ದಾರೆ. ಇದು ಆಡಳಿತಾಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಫರಿದಾಬಾದ್‌ನ ಅರಾವಳಿಯಲ್ಲಿರುವ ಈ ಸಾವಿನ ಸರೋವರದ ಕಥೆ ಎಂಥವರನ್ನಾಗಲಿ ಅರಕ್ಷಣ ಚಕಿತಗೊಳಿಸುತ್ತದೆ. ಇಲ್ಲಿಯವರೆಗೆ ಈ ಸರೋವರದಲ್ಲಿ ನೂರಾರು ಜೀವಗಳು ಕೊನೆಗೊಂಡಿವೆ.

ABOUT THE AUTHOR

...view details