ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ನಿಲ್ಲದ ವರುಣಾರ್ಭಟ: ಸಾವಿನ ಸಂಖ್ಯೆ 27 ಕ್ಕೆ ಏರಿಕೆ, ಅಣೆಕಟ್ಟಿನ ಬಾಗಿಲು ಓಪನ್​ ಬಗ್ಗೆ ನಿರ್ಧರಿಸಲು ತಜ್ಞರ ತಂಡ ರಚನೆ - ಕೇರಳದಲ್ಲಿ ಮಳೆ

ಕೇರಳದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದ ಇದುವರೆಗೆ 27 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರವು ರಾಜ್ಯದ ವಿವಿಧ ಸ್ಥಳಗಳಲ್ಲಿ 184 ಪರಿಹಾರ ಶಿಬಿರಗಳನ್ನು ತೆರೆದಿದೆ. ವಿವಿಧ ಅಣೆಕಟ್ಟುಗಳ ಬಾಗಿಲು ತೆರೆಯುವ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಡ್ಯಾಮ್ ಶಟರ್ ತೆರೆಯುವ ಬಗ್ಗೆ ಈ ತಜ್ಞರ ಸಮಿತಿ ನಿರ್ಧಾರ ತೆಗೆದುಕೊಳ್ಳುವುದು ಎಂದು ಹೇಳಿದರು.

ಕೇರಳದಲ್ಲಿ ವರುಣಾರ್ಭಟ
ಕೇರಳದಲ್ಲಿ ವರುಣಾರ್ಭಟ

By

Published : Oct 18, 2021, 3:38 PM IST

ತಿರುವನಂತಪುರಂ(ಕೇರಳ): ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಸಿತದ ಪರಿಣಾಮ ಕೇರಳ ಅಕ್ಷರಶಃ ನಲುಗಿದೆ. ಕಳೆದೆರಡು ದಿನದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಸಾವಿನ ಸಂಖ್ಯೆ 27 ಕ್ಕೆ ಏರಿಕೆ:

ಕೇರಳದಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದ ಇದುವರೆಗೆ 27 ಮಂದಿ ಸಾವನ್ನಪ್ಪಿದ್ದಾರೆ. ಕೊಕ್ಕಾಯಾರ್ ಭೂಕುಸಿತದ ನಂತರ ನಾಪತ್ತೆಯಾಗಿದ್ದ ಸಚ್ಚು ಫೈಸಲ್ (7) ನ ಶವವನ್ನು ರಕ್ಷಣಾ ತಂಡ ಪತ್ತೆ ಮಾಡಿದೆ. ನಾಪತ್ತೆಯಾದವರ ಶವಗಳನ್ನು ಕೊಕ್ಕಾಯಾರ್‌ನಿಂದ ಹೊರತೆಗೆಯಲಾಗಿದ್ದು, ರಕ್ಷಣಾ ತಂಡವು ಈ ಪ್ರದೇಶದಲ್ಲಿ ಶೋಧ ಕಾರ್ಯವನ್ನು ಅಂತ್ಯಗೊಳಿಸಿದೆ.

ಆದಾಗ್ಯೂ, ಭೂಕುಸಿತದ ಸಮಯದಲ್ಲಿ ನಾಪತ್ತೆಯಾದ ಅನ್ಸಿಯ ಹುಡುಕಾಟ ಇನ್ನೂ ಮುಂದುವರೆದಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಹೆಚ್ಚಿನ ಸಾವುಗಳು ವರದಿಯಾಗಿವೆ. 14 ಜನರು ಕೊಟ್ಟಾಯಂನಲ್ಲಿ ಮತ್ತು 9 ಜನರು ಇಡುಕ್ಕಿ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅನಾಹುತಗಳಲ್ಲಿ ಸಾವನ್ನಪ್ಪಿದ್ದಾರೆ.

184 ಪರಿಹಾರ ಶಿಬಿರಗಳು:

ರಾಜ್ಯ ಸರ್ಕಾರವು ರಾಜ್ಯದ ವಿವಿಧ ಸ್ಥಳಗಳಲ್ಲಿ 184 ಪರಿಹಾರ ಶಿಬಿರಗಳನ್ನು ತೆರೆದಿದೆ. ವಿವಿಧ ಅಣೆಕಟ್ಟುಗಳ ಬಾಗಿಲು ತೆರೆಯುವ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಡ್ಯಾಮ್ ಶಟರ್ ತೆರೆಯುವ ಬಗ್ಗೆ ಈ ತಜ್ಞರ ಸಮಿತಿ ನಿರ್ಧಾರ ತೆಗೆದುಕೊಳ್ಳುವುದು ಎಂದು ಹೇಳಿದರು.

ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು, ಸಮಿತಿಯು ಅಣೆಕಟ್ಟು ತೆರೆಯುವ ಕುರಿತು ತಮ್ಮ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಗಂಟೆಗಳ ಮುಂಚಿತವಾಗಿ ತಿಳಿಸುತ್ತದೆ. ತಗ್ಗು ಪ್ರದೇಶಗಳಿಂದ ಮತ್ತು ನದಿ ತೀರದಿಂದ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಸಮಯ ನೀಡಬೇಕು.

ಪರಿಹಾರ ಶಿಬಿರಗಳಲ್ಲಿ ಆಹಾರ, ಉಡುಪುಗಳು ಮತ್ತು ಹಾಸಿಗೆಗಳನ್ನು ಖಾತ್ರಿಪಡಿಸಿಕೊಳ್ಳುವಂತೆ ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಕಂದಾಯ ಇಲಾಖೆಯ ಹೊರತಾಗಿ, ಎಲ್ಲ ಸ್ಥಳೀಯ ಸ್ವ - ಸರ್ಕಾರಿ ಇಲಾಖೆಗಳು ಸಹ ಅಂತಹ ಸರಬರಾಜುಗಳನ್ನು ನೋಡಿಕೊಳ್ಳಬೇಕು. ಅಂತಹ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಾಮಾಜಿಕ ಗುಂಪುಗಳ ಸಹಾಯವನ್ನೂ ಪಡೆಯಲಾಗುವುದು ಎಂದು ಸಿಎಂ ಹೇಳಿದರು.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸಾರ್ವಜನಿಕರೂ ಬೆಂಬಲ:

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಪಡೆಗಳಿಗೆ ಸಾರ್ವಜನಿಕರೂ ಬೆಂಬಲ ನೀಡುತ್ತಿದ್ದಾರೆ. ಭೂ ಕುಸಿತ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸುವಂತೆ ಅವರು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದರು.

ಭಾರೀ ನೀರು ತುಂಬಿರುವ ಪ್ರದೇಶಗಳಲ್ಲಿ ವಾಹನಗಳು ಓಡಾಡಲು ಅವಕಾಶ ನೀಡಬಾರದು. ಹಾನಿಗೊಳಗಾದ ಜನರಿಗೆ ಹಣಕಾಸಿನ ಸಹಾಯವನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಯಿತು.

ಓದಿ:ಮಳೆಗೆ ನಲುಗಿದ ಕೇರಳ, ಸಾವಿನ ಸಂಖ್ಯೆ 23ಕ್ಕೆ ಏರಿಕೆ.. ಮೋದಿ ನೆರವಿನ ಅಭಯ

ABOUT THE AUTHOR

...view details