ನವದೆಹಲಿ:ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಅವರಿಗೆ Email ಮೂಲಕ ಜೀವ ಬೆದರಿಕೆ ಹಾಕಲಾಗಿದ್ದು, ಈ ಕುರಿತು ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಪೊಲೀಸ್ ಠಾಣೆ ಹಾಗೂ ಜಿಲ್ಲಾ DCPಗೆ ದೂರು ನೀಡಿದ್ದಾರೆ.
ಐಸಿಸ್ ಭಯೋತ್ಪಾದಕ ಸಂಘಟನೆ ಕಾಶ್ಮೀರದಿಂದ ತನಗೆ ಜೀವ ಬೆದರಿಕೆ ಇ-ಮೇಲ್ ಕಳುಹಿಸಿದೆ ಎಂದು ಗೌತಮ್ ಗಂಭೀರ್ ಆರೋಪ ಮಾಡಿದ್ದು, ಕುಟುಂಬಕ್ಕೂ ಬೆದರಿಕೆ ಬಂದಿರುವ ಕಾರಣದಿಂದ ಪ್ರಸ್ತುತ ಅವರು ವಾಸವಿರುವ ರಾಜೇಂದ್ರ ನಗರದ ಮನೆಗೆ ಭದ್ರತೆ ನೀಡಲಾಗಿದೆ ಎಂದು ಡಿಸಿಪಿ ಶ್ವೇತ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.