ಲಖನೌ (ಉತ್ತರ ಪ್ರದೇಶ): ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಅರೋರಾಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಕೈಲಾಶ್ ಬಹದ್ದೂರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ರೇರಾ ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯ ರಾಜೀವ್ ಮಿಶ್ರಾ, ನಗರದ ಪಿಜಿಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅರೋರಾ ಅವರಿಗೆ 9415132767 ಸಂಖ್ಯೆಯಿಂದ ವಾಟ್ಸ್ಆ್ಯಪ್ ಮೆಸೇಜ್ ಬಂದಿತ್ತು. ಅದರಲ್ಲಿ ‘ಡಿ.ಕೆ. ಅರೋರಾ, ನಾನು ಸುಂದರ್ಲಾಲ್ ಅಮ್ಮನಾಗಿ, ನರಳಲು ಸಾಧ್ಯವಿಲ್ಲ. ನಾನು ಪ್ರತಾಪ್ಗಡದ ಕೈಲಾಶ್ ಸಿಂಗ್. ನಾನು ನ್ಯಾಯಾಲಯಕ್ಕೆ ಬಂದು ನಿನ್ನನ್ನು ಶೂಟ್ ಮಾಡುತ್ತೇನೆ’ ಎಂದು ಉಲ್ಲೇಖಿಸಿದ್ದರು. ಜೀವ ಬೆದರಿಕೆ ಬಂದ ಬಳಿಕ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಅರೋರಾ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ.
ರಾಜೀವ್ ಮಿಶ್ರಾ, ಪ್ರಕರಣ ದಾಖಲಿಸುವಾಗ ಅರೋರಾರಿಗೆ ನ್ಯಾಯಾಲಯದಲ್ಲಿ ಭದ್ರತೆ ಹೆಚ್ಚಿಸಬೇಕು ಎಂದು ಉಲ್ಲೇಖಿಸಿದ್ರು. ಅಲಹಾಬಾದ್ ಹೈಕೋರ್ಟ್‌ನ ಲಖನೌನ ಬೆಂಚ್‌ನ ಹಿರಿಯ ನ್ಯಾಯಾಧೀಶರಿಗೂ ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ. ಐಪಿಸಿ ಸೆಕ್ಷನ್ 506, 507 ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಪಿಜಿಐ ಪೊಲೀಸರು ತನಿಖೆ ಆರಂಭಿಸಿದ್ದಾರೆ.